ದೊಡ್ಡಬಳ್ಳಾಪುರ : ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ ಸುರಿದಿದೆ.
ಬೆಳ್ಳಂಬೆಳಗ್ಗೆ 4 ಗಂಟೆಯ ಸುಮಾರಿಗೆ ಆರಂಭವಾದ ಮಳೆ,ಸುಮಾರು 3 ಗಂಟೆಗಳ ಕಾಲ ಜೋರಾಗಿಯೇ ಸುರಿದಿದೆ.
ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ 6 ನಂತರ ಮಳೆ ಬಿಡುವನ್ನು ನೀಡಿದ್ದರೆ,ನಗರದಲ್ಲಿ 7.30ರ ನಂತರ ಬಿಡುವು ನೀಡಿತ್ತು.
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪನ್ನು ತಂದಿದ್ದು,ರೈತರ ಚಟುವಟಿಕೆ ಆರಂಭವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ,ಮತ್ತಷ್ಟು ಹೆಚ್ಚಿನ ವರದಿಗಳಿಗೆ ಪೇಜ್ ಲೈಕ್ ಮಾಡಿ,ಫಾಲೋ ಮಾಡಿ.