ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ನೋಂದಣೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಬೆಂಗಳೂರು ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರದ ವ್ಯವಸ್ಥಾಪಕ ಮಹೇಶ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಲಿನಜೋಗಹಳ್ಳಿ (ಎಸ್.ಎಸ್.ಘಾಟಿ), ಹೊಸಹಳ್ಳಿ, ಕಾಡನೂರು, ಕೆಸ್ತೂರು, ಮಜಾರಹೊಸಹಳ್ಳಿ, ಸಕ್ಕರೆ ಗೊಲ್ಲಹಳ್ಳಿ ಹಾಗೂ ಸಾಸಲು ಪಂಚಾಯಿತಿ.
ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ, ದೊಡ್ಡನಲ್ಲಾಳ, ಗಣಗಲೂರು, ಹೆತ್ತಕ್ಕಿ ಹಾಗೂ ಒರೋಹಳ್ಳಿ ಪಂಚಾಯಿತಿ.
ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ, ಬಿದಲೂರು, ಬಿಜ್ಜವಾರ, ಚೆನ್ನಹಳ್ಳಿ, ಗಂಗವಾರ, ಚೌಡಪ್ಪನಹಳ್ಳಿ ಹಾಗೂ ಜಾಲಿಗೆ ಪಂಚಾಯಿತಿ.
ನೆಲಮಂಗಲ ತಾಲ್ಲೂಕಿನ ಅರೆಬೊಮ್ಮನಹಳ್ಳಿ, ಹೊನ್ನೆನಹಳ್ಳಿ, ಮರಳಕುಂಟೆ ಹಾಗೂ ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಎಸ್.ಸಿ ಕೇಂದ್ರಗಳು ಸ್ಥಾಪಿಸಲು ಅರ್ಜಿ ಸಲ್ಲಿಸಬಹುದು.
ಆಸಕ್ತರು ಈ ಮೇಲ್ಕಂಡ ಪಂಚಾಯಿತಿಯ ವಿಳಾಸದಲ್ಲೇ ವಾಸವಿದ್ದು, ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗೆ 8553652993, 9206057357