ದೊಡ್ಡಬಳ್ಳಾಪುರ : ಕರೊನಾ ಸೋಂಕನ್ನು ತಡೆಗಟ್ಟಲು ಶ್ರಮಿಸುತ್ತಿರುವ ನಗರಸಭೆಯ ಪೌರ ಕಾರ್ಮಿಕರಿಗೆ,ದೊಡ್ಡಬಳ್ಳಾಪುರ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ನಗರದ ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ.ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸುಮಾರು 200ಮಂದಿ ಪೌರ ಕಾರ್ಮಿಕರಿಗೆ ಹೂಗುಚ್ಚ ನೀಡಿ ಗೌರವ ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ಸಂಚಾಲಕ್ ಬಾಸ್ಕರ್ ಭಗತ್,ಕರೊನಾ ಸೋಂಕನ್ನು ತಡೆಗಟ್ಟಲು ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಕರೊನಾ ವಾರಿಯಾರ್ಸ್ ಕಾರ್ಯ ಪ್ರಶಂಸನೀಯವಾಗಿದೆ.ಗಡಿ ಕಾಯುವ ಯೋಧರಂತೆ,ನಮ್ಮ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರವ ನಗರಸಭೆ ಸಿಬ್ಬಂದಿ ಹಾಗೂ ಪೌರ ಕರ್ಮಿಕರ ಕಾರ್ಯವನ್ನು ಪ್ರತಿಯೊಬ್ಬರೂ ಪ್ರಶಂಶಿಸಬೇಕು ಎಂದರು.
ಈ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರಾದ ಜಿಲ್ಲಾ ಸಂಚಾಲಕ ಮಧುಬೇಗಲಿ,ನಗರಸಂಚಾಲಕ್ ಗಿರೀಶ್, ಸಹ ಸಂಚಾಲಕ ವಿರಾಜ್,ಕಾರ್ಯಕರ್ತರಾದ ತೇಜಸ್,ಶ್ರೀಕಾಂತ್,ಹೇಮಂತ್,ತೇಜಸ್,ಅರ್ಜುನ್,ಮಹೇಶ್ ಮತ್ತಿತರಿದ್ದರು.