ದೊಡ್ಡಬಳ್ಳಾಪುರ : ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾಲೂಕಿನ ಹಿರಿಯ ರಾಜಕಾರಣಿ ಕೆ.ಜಿ.ಅಶೋಕ್ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಸಕ ಟಿ.ವೆಂಕಟರಮಣಯ್ಯಮಾತನಾಡಿ, ಕೆ.ಜಿ.ಅಶೋಕ್ ಅವರ ನಿಧನದಿಂದಾಗಿ ಕಾಂಗ್ರೆಸ್ ಪಕ್ಷ ನಿಷ್ಟಾವಂತ ಕಾರ್ಯಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ.ಪಕ್ಷಕ್ಕೆ ಅವರ ಸೇವೆ ಅನನ್ಯವಾಗಿದೆ.ಸಮಾಜದಲ್ಲಿ ಜನರೊಂದಿಗೆ ಬೆರೆಯುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದುದು ಸ್ಮರಣೀಯ ಎಂದರು.
ಕೆಪಿಸಿಸಿ ಸದಸ್ಯರಾದ ಎಂ.ಜಿ.ಶ್ರೀನಿವಾಸ್, ಜಿ.ಲಕ್ಷ್ಮೀಪತಿ ಮಾತನಾಡಿ, ಕೆ.ಜಿ.ಅಶೋಕ್ ಅವರು ತಮ್ಮ ತಂದೆ ದಿವಂಗತ ಕೆ.ಸಿ.ಗುರುರಾಜಪ್ಪ ಅವರಂತೆಯೇ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದರು.ಯಾರು ಪಕ್ಷ ತೊರೆದರೂ,ರಾಜಕೀಯದಲ್ಲಿ ಸ್ಥಿತ್ಯಂತರಗಳಾದರೂ ಕಾಂಗ್ರೆಸ್‌ಗೆ ತಮ್ಮ ಪಕ್ಷ ನಿಷ್ಟೆ ಮೆರೆದಿದ್ದರು.ಅವರ ಅಕಾಲಿಕ ಸಾವು ನೋವಂಟು ಮಾಡಿದ್ದು,ಆತ್ಮೀಯ ಗೆಳೆಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರ ಒಡನಾಟವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಬ್ಲಾಕ್ ಅಧ್ಯಕ್ಷ ರಾ.ಬೈರೇಗೌಡ, ನಗರ ಪ್ರಧಾನ ಕಾರ್ಯದರ್ಶಿಗಳಾದ ಯೋಗ ನಟರಾಜ್,ಆಂಜಿನ ಮೂರ್ತಿ,ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜವಾಜಿ ರಾಜೇಶ್,ಎಸ್.ಸಿ.ಘಟಕದ ನಗರ ಅಧ್ಯಕ್ಷ ಬಿ.ಮುನಿರಾಜು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾವತಿ,ಮುಖಂಡರಾದ ಕೆ.ಪಿ.ಜಗನ್ನಾಥ್,ಪು.ಮಹೇಶ್,ವಿದ್ಯಾರ್ಥಿ ಘಟಕ ಅಶ್ವಥ್ ರೆಡ್ಡಿ ಮೊದಲಾದವರು ಭಾಗವಹಿಸಿದ್ದರು.