ದೊಡ್ಡಬಳ್ಳಾಪುರ : ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದ ಹಜ್ರತ್ ಜಹೀರುದ್ದಿನ್ ಷಾವಾಲಿ ದರ್ಗಾದಲ್ಲಿನ ಹುಂಡಿಯನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸುಮಾರು ಒಂದು ವರ್ಷಗಳಿಂದ ತೆಗೆಯದ ಹುಂಡಿಯನ್ನು ಕಳ್ಳರು ಹೊತ್ತೊಯ್ದಿದ್ದು ಸೋಮವಾರ ಬೆಳಗ್ಗಿನ ಜಾವ,ದರ್ಗಾದಲ್ಲಿ ಹಾಕಲಾಗಿದ್ದ ಲೈಟ್ ಆಫ್ ಮಾಡಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ ಎಂದು ನೂರಾನಿ ಮಝೀದ್ ಅಧ್ಯಕ್ಷ ಅಪ್ಸರ್ ಪಾಷಾ ತಿಳಿಸಿದ್ದಾರೆ.