ದೊಡ್ಡಬಳ್ಳಾಪುರ : ಜನರಿಂದ ರಂಗಣ್ಣ ಎಂದು ಕರೆಯಲ್ಪಡುವ ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್ ಇಂದು 54ನೇ ಜನ್ಮದಿನವನ್ನು ಆಚರಿಸಿಕೊಳ್ಳುತಿದ್ದಾರೆ.
ರಂಗಣ್ಣ,ಕ್ಯಾಪ್ಟನ್,ಫೈರ್ ಬ್ರಾಂಡ್ ಎಂದು ಬಿರುದು ಪಡೆದಿರುವ ರಂಗಣ್ಣ.ರಾಮಕೃಷ್ಣಯ್ಯ ಮತ್ತು ಲೀಲಾ ಅವರ ಮೂರನೇ ಮಗನಾಗಿ 12.ಮೇ.1966ರಲ್ಲಿ ಮೈಸೂರಿನ ರೈಲ್ವೆ ಹಾಸ್ಪಿಟಲ್‌ನಲ್ಲಿ ಜನಸಿದವರು.
ಕನ್ನಡಪ್ರಭ ದಿನಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ರಂಗಣ್ಣ,ಸುವರ್ಣ ನ್ಯೂಸ್ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ವೇಳೆ ಅವರ ಆತ್ಮಸಾಕ್ಷಿಗೆ ವಿರುದ್ದವಾಗಿ ಕೆಲವು ಕೆಲಸ ಮಾಡಬೇಕಾದ ಒತ್ತಡ ಬಂದಾಗ,ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹೊರಬಂದು,ಸ್ವಂತ ಟಿವಿ ಆರಂಭಿಸುತ್ತಾರೆ.ಈ ವೇಳೆ ಎದುರಾದ ಪಬ್ಲಿಕ್ ಟ್ರಾನ್ಸ್ಪೋರ್ಟ್ ಎಂದು ಬರೆದಿದ್ದನ್ನು ನೋಡಿ ಪಬ್ಲಿಕ್ ಟಿವಿಯೇಂದು ಜ.26,2012ರಂದು ಚಾನಲ್ ಆರಂಭಿಸಿದರು.ಅಲ್ಲದೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ಪಬ್ಲಿಕ್ ಟಿವಿ ಅತ್ಯುತ್ತಮ ಸುದ್ದಿವಾಹಿನಿಯಾಗಿ ಹೊರಹೊಮ್ಮುತ್ತದೆ.
ಕರೊನಾ ಸೋಂಕಿನ ಕಾರಣ ಘೋಷಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ವೀಕ್ಷಕರ ಸಮಸ್ಯೆಗಳಿಗೆ ವೇದಿಕೆ ಕಲ್ಪಿಸಿದ ಕರ್ನಾಟಕದ ಜನತೆಯ ವಿಶ್ವಾಸಗಳಿಸಿದ್ದಾರೆ.ಆರೋಪ,ಕೆಲ ಯಡವಟ್ಟುಗಳೇನೆ ಇದ್ದರು ಮಾದ್ಯಮ ಲೋಕಕ್ಕೆ ಕಾಲಿಡುವ ಯುವ ಜನಾಂಗಕ್ಕೆ ಮಾದರಿಯಾಗಿರುವ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್ 54ನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿದ್ದು,ಹರಿತಲೇಖನಿ ತಂಡ ಕ್ಯಾಪ್ಟನ್ ರಂಗಣ್ಣರಿಗೆ ಶುಭ ಹಾರೈಸುತ್ತದೆ.
ಆಲ್ರೈಟ್ ಮುಂದಕ್ ಓಗೋಣಾ…