ದೊಡ್ಡಬಳ್ಳಾಪುರ : ರೈಲ್ವೆ ನೌಕರನಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಕಾರಣ, ಕೋಡಿಪಾಳ್ಯಕ್ಕೆ ಘೋಷಿಸಿದ್ದ ಸೀಲ್ ಡೌನ್ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ದೆಹಲಿಗೆ ಹೋಗಿ ಬಂದಿದ್ದ ರೈಲ್ವೆ ನೌಕರನಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಕಾರಣ 40 ದಿನಗಳಿಂದ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು.
ಕಳೆದ 28 ದಿನಗಳಿಂದ ಯಾರಲ್ಲು ಸೊಂಕು ಕಂಡು ಬಾರದ ಹಿನ್ನೆಲೆ,ಗ್ರಾಮದ ಸೀಲ್ ಡೌನ್ ತೆರವುಗೊಳಿಸುವಂತೆ ಡಿಸಿ ರವೀಂದ್ರ ಆದೇಶಿಸಿದ್ದಾರೆ.
40 ದಿನಗಳ ನಂತರ ಸೀಲ್ ಡೌನ್ ನಿಂದ ಗ್ರಾಮಸ್ಥರಿಗೆ ಮುಕ್ತಿದೊರಕಿದೆ.ಗ್ರಾಮಸ್ಥರು ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಡಿಸಿ ಪಿ.ಎನ್.ರವೀಂದ್ರ ಮನವಿ ಮಾಡಿದ್ದಾರೆ.