ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಕಾರಣ,ರಕ್ತದಾನ ಶಿಬಿರಗಳು ನಡೆಯದೆ.ರಕ್ತದ ಕೊರತೆ ಹೆಚ್ಚಾಗಿದ್ದು,ಈ ನಿಟ್ಟಿನಲ್ಲಿ ಹಿಂದು ಜಾಗರಣ ವೇದಿಕೆಯ ವತಿಯಿಂದ ರಾಜಾನುಕುಂಟೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ವೇಳೆ 125 ಯೂನಿಟ್ ರಕ್ತ ಸಂಗ್ರಹಿಸಿ ರಾಷ್ಟ್ರೋತ್ಥಾನ ರಕ್ತ ನಿಧಿಗೆ ನೀಡಲಾಯಿತು.
ಬೆಂಗಳೂರು ಮಹಾನಗರ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ರಾಜಣ್ಣ,ಕಾರ್ಯದರ್ಶಿಗಳಾದ ಕೇಶವ,ಯಶವಂತಪುರ ವೇಣುಗೋಪಾಲ್ ,ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರುಆನಂದ್,ಕಾರ್ಯಕ್ರಮ ಸಂಯೋಜಕ ದೃವ ಮತ್ತಿತರಿದ್ದರು.