ದೊಡ್ಡಬಳ್ಳಾಪುರ: ಲಾಕ್‌ಡೌನ್ ಜಾರಿಯಾದ ಮೇಲೆ ಗಾರ್ಮೆಂಟ್ಸ್‌ಗಳಿಗೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರು ಕೆಲಸ ಇಲ್ಲದೆ ಪರದಾಡುತ್ತಿರುವ ಸ್ಥಿತಿ ಒಂದು ಕಡೆಯಾದರೆ, ನಾವು ಕಷ್ಟಪಟ್ಟು ದುಡಿದಿರುವ ಸಂಬಳವನ್ನು ಕೊಡಿಸುವಂತೆ ಒಂದು ವಾರಗಳಿಂದಲು ಗ್ರಾಮಾಂತರ ಪೊಲೀಸ್ ಠಾಣೆ ಮುಂದಿನ ಅರಳಿಕಟ್ಟೆ ಬಳಿ ಬಂದು ಕಾಯುತ್ತಿ ಕುಳಿತುಕೊಳ್ಳುವಂತಾಗಿದೆ ಎಂದು ಅರುಣ್ ಎಂಟರ್ ಪ್ರೈಸಸ್ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.
ಈ ಬಗ್ಗೆ ಮಾಹಿತಿ ನೀಡಿದ, ಸಿದ್ದಗಂಗಮ್ಮ, ಶ್ರೀನಿವಾಸ್, ನಂದಿನಿ, ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕೆಲಸ ಮಾಡಿರುವ ಸಂಬಳವನ್ನು ಸಹ ನೀಡಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದೇ ಕನಿಷ್ಠ ಕೂಲಿಯನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ. ಆದರೆ ಲಾಕ್‌ಡೌನ್ ಜಾರಿಗೂ ಮುನ್ನ ಕೆಲಸ ಮಾಡಿರುವ ಕೂಲಿಯನ್ನು ಸಹ ನೀಡದೆ ವಂಚಿಸಲಾಗಿದೆ. ಸಂಬಳ ನೀಡುವಂತೆ ಕೇಳುವ ಕಾರ್ಮಿಕರನ್ನು ವಜಾಮಾಡುವ ಬೆದರಿಕೆ ಒಡ್ಡಲಾಗುತ್ತಿದೆ. ಈ ಕುರಿತಂತೆ ಕಾರ್ಮಿಕ ಇಲಾಖೆ ಆಯುಕ್ತರು ಸೇರಿದಂತೆ ಎಲ್ಲರಿಗೂ ಮನವಿಗಳನ್ನು ಸಲ್ಲಿಸಿದ್ದರು ಇದುವರೆಗೂ ಯಾರು ಸಹ ಕ್ರಮ ಕೈಗೊಂಡಿಲ್ಲ. ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ನೀಡಿ ಸಂಬಳ ಕೊಡಿಸುವಂತೆ ಪ್ರತಿದಿನ ಬಂದು ಠಾಣೆ ಮುಂದಿನ ಅರಳಿಕಟ್ಟೆ ಮುಂದೆ ಕಾದುಕುಳಿತಿದ್ದೇವೆ ಎಂದರು.