ದೊಡ್ಡಬಳ್ಳಾಪುರ : ಅಂತಾರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಮಾಡಲೇಂದು ಸಿದ್ದತೆ ನಡೆಸುತ್ತಿರುವ ಕ್ವಾರಂಟೈನ್ ಕೇಂದ್ರಗಳಿಗೆ,ಅವೈಜ್ಞಾನಿಕವಾಗಿ ಸಿಬ್ಬಂದಿ ನೇಮಕ ಮಾಡಿರುವುದರಿಂದ. ತಾಲೂಕಿನ ಜನತೆಯಲ್ಲಿ ಆತಂಕ ಹೆಚ್ಚಾಗಿದೆ ಎಂದು ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
#ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು,ಕ್ವಾರಂಟೈನ್ ಕೇಂದ್ರಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ.ಗ್ರಾಮ ಪಂಚಾಯಿತಿ ವಾಟರ್ ಮನ್ ಗಳನ್ನು ತಾಲೂಕು ಆಡಳಿತ ಪಾಳಿ ವ್ಯವಸ್ಥೆಯಲ್ಲಿ ನೇಮಿಸಿದೆ.
ಆದರೆ ಕ್ವಾರಂಟೈನ್ ಕೇಂದ್ರದಿಂದ ಹೊರಬಂದು ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆಯಿರುವ ವಾಟರ್ ಮನ್ ಗಳಿಂದಾಗಿ ಇಡೀ ಗ್ರಾಮಗಳಿಗೆ ಕರೊನಾ ಹರಡುವ ಆತಂಕ ಎದುರಾಗಿದೆ.
ಈ ನಿಟ್ಟಿನಲ್ಲಿ ಅವೈಜ್ಞಾನಿಕ ಸಿಬ್ಬಂದಿ ನೇಮಕ ಬದಿಗೊತ್ತಿ.ನೇಮಕ ಮಾಡುವುದಾದರೆ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಸಿಬ್ಬಂದಿಗಳು ಹೊರಬರದಂತೆ ನೇಮಕ ಮಾಡಬೇಕೆಂದು,ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
” ಸಿಬ್ಬಂದಿಯ ಬಗ್ಗೆ ಸಕಲ ಮುಂಜಾಗ್ರತೆ ವಹಿಸಲಾಗಿದೆ “
ಈ ಕುರಿತು ಸ್ಪಷ್ಟಣೆ ನೀಡಿರುವ ತಹಶಿಲ್ದಾರ್ ಟ.ಎಸ್.ಶಿವರಾಜ್,ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಯಾವುದೇ ತೊಂದರೆ ಉಂಟಾಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಅಲ್ಲದೆ ಕೇಂದ್ರಗಳಿಗೆ ಶಾಶ್ಚಾತ ಸಿಬ್ಬಂದಿ ನೇಮಿಸಲು ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.