ದೊಡ್ಡಬಳ್ಳಾಪುರ : ತಾಲೂಕಿನ ಬಚ್ಚಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ #ಹರಿತಲೇಖನಿಗೆ ತಿಳಿಸಿದ್ದಾರೆ.
” ಸೋಂಕಿತರ ಮಾಹಿತಿ “
1,ಮೆ.19ರಂದು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ P- 2331 ಹೊಸಹಳ್ಳಿ ತಾಂಡ್ಯದ 45ವರ್ಷದ ವ್ಯಕ್ತಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು,ಕರೊನಾ ದೃಢಪಟ್ಟಿದೆ.(ಮೆ.19ರಂದು ಆರು ಮಂದಿ ಮುಂಬೈನಿಂದ ಬಂದು ಕ್ವಾರಂಟೈನ್ ಗೆ ಒಳಗಾಗಿದ್ದರು.ಈಗಾಗಲೇ ಇವರಲ್ಲಿ ಮೂವರಿಗೆ ಸೋಂಕು ದೃಢಪಟ್ಟಿತ್ತು).
2,ಹಾಸನದಲ್ಲಿ ಕರ್ತವ್ಯ ನಿರತವಾಗಿದ್ದ P – 2332 ಸಾಸಲು ಹೋಬಳಿಯ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಂತಯ್ಯನಪಾಳ್ಯ(ಕಡೇಪಾಳ್ಯ)ದ ನಿವಾಸಿ 27ವರ್ಷದ ಕೆಎಸ್ಆರ್ಪಿಎಫ್ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿದೆ.
ಕರ್ತವ್ಯ ನಿರತ ಈತನ ಸಹೋದ್ಯೋಗಿಗೆಗೆ ಕರೊನಾ ಸೋಂಕು ದೃಡಪಟ್ಟ ಹಿನ್ನೆಲೆ,ಗ್ರಾಮಕ್ಕೆ ಬಂದಿದ್ದ ಈತನನ್ನು ಮೆ.24ರಂದು ಕ್ವಾರಂಟೈನ್ ಒಳಪಡಿಸಲಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ # ಹರಿತಲೇಖನಿಗೆ ದೃಢಪಡಿಸಿದ್ದಾರೆ.
” ನಿಶ್ಚಿತಾರ್ಥ ಹೆಚ್ಚಿಸಿದ ಆತಂಕ “
ಮೆ24ರಂದೆ..ಕೆಎಸ್ ಆರ್ಪಿ ಎಫ್ ಹುದ್ದೆಯಲ್ಲಿದ್ದ ವ್ಯಕ್ತಿಗೆ ನಿಶ್ಚಿತಾರ್ಥವಾಗಿತ್ತು ಎನ್ನಲಾಗುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಈ ಹಿನ್ನೆಲೆ ನಿಶ್ಚಿತಾರ್ಥಕ್ಕೆ ತೆರಳಿದ್ದವರ ಹಾಗೂ ಈತನ ಸಂಪರ್ಕದಲ್ಲಿವರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು.