ದೊಡ್ಡಬಳ್ಳಾಪುರ : ಕರೊನ ಸೋಂಕು ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಸಮಸ್ಯೆಗೆ ಒಳಗಾದ ದೊಡ್ಡತುಮಕೂರು ಹಾಗೂ ಅರಳುಮಲ್ಲಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಗುರುವಾರ ದಿನಸಿ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಕರೊನಾ ಸೋಂಕು ವಿಶ್ವಕ್ಕೆ ತೀವ್ರ ಸಂಕಷ್ಟದ ಸಮಯವನ್ನು ಉಂಟು ಮಾಡಿದೆ.ಲಾಕ್ ಡೌನ್ ನಿಂದಾಗಿ ಜನತೆ ತೀವ್ರ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆಯಾದರೂ,ಸೋಂಕು ತಡೆಗಟ್ಟಲು ಜನತರ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾಪಂಚಾಯಿತಿ ಸದಸ್ಯ ಚುಂಚೇಗೌಡ,ತಾಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕೆಂಪಣ್ಣ,ಮುಖಂಡರಾದ ರಾಮಕೃಷ್ಣ ಮತ್ತಿತರಿದ್ದರು.