ದೊಡ್ಡಬಳ್ಳಾಪುರ : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಕಳಿ ದುರ್ಗದ ಬಳಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಮೃತನ ಕತ್ತಿನ ಮೇಲೆ ಯಾವುದೋ ವಸ್ತುವಿನಿಂದ ಕತ್ತನ್ನು ಜೀರಿದಾಗ ಆಗುವ ಕಲೆಯಂತೆ ಕಂಡು ಬರುತ್ತದೆ.ಮೃತನ ಕೈ ಮೇಲೆ ಕನ್ನಡದಲ್ಲಿ “ಲಕ್ಷ್ಮಿ” ಎಂಬ ಹಚ್ಚೆ ಗುರುತು ಇರುತ್ತದೆ ಹಾಗೂ ಎದೆಯ ಮೇಲೆ “ಭಾಗ್ಯಮ್ಮ” ಎಂಬ ಹಚ್ಚೆ ಇರುತ್ತದೆ.
ಈ ಬಗ್ಗೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಮೃತನ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರ ಫೋನ್ ನಂಬರ್ 9480802453 ಗೆ ಸಂಪರ್ಕಿಸಲು ಕೋರಿದೆ.