October 6, 2024 11:46 am

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ : ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು : ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ,  ಬಿ.ಬಿ.ಎಂ.ಪಿ ನಿಯಂತ್ರಣಾ ಕೊಠಡಿ/ಸಹಾಯವಾಣಿಗಳಿಗೆ  ಸಾರ್ವಜನಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.  

ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಅವರ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.   

ನಿನ್ನೆ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ಸಾವೀಗೀಡಾದ ಇಬ್ಬರು ಹೆಣ್ಣು ಮಕ್ಕಳ ಕುಟುಂಬಕ್ಕೆ ಬಿ.ಬಿ.ಎಂ.ಪಿ ವತಿಯಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಕೊಡಲಾಯಿತು. ಅಪಾಯಕಾರಿ ರೆಂಬೆ ಕೊಂಬೆಗಳನ್ನು ಗುರುತಿಸಿ ಕತ್ತರಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದ ಅವರು,  ಎರಡು ದಿನಗಳಲ್ಲಿ ನಗರದಲ್ಲಿ  ಮಳೆಯಿಂದ ಬಿದ್ದ ಮರಗಳನ್ನು  ತೆರವುಗೊಳಿಸಲು   ಅಧಿಕಾರಿಗಳಿಗೆ ಸೂಚಿಸಿದರು. ನಗರ ಸಂಚಾರಕ್ಕೆ ಬಂದ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  ನಗರದಲ್ಲಿ ಯಾವುದೇ ಸಾವು, ನೋವು ಸಂಭವಿಸದಂತೆ ಅಗತ್ಯವಿರುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. 

ಬಿ.ಬಿ.ಎಂ.ಪಿ, ಪೊಲೀಸ್, ಅರಣ್ಯ, ಸಾರಿಗೆ ಹಾಗೂ ಅಗ್ನಿಶಾಮಕ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಆದೇಶಿಸಿದರು. ಮರಗಳ ಕೆಳೆಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತವಾಗುವುದನ್ನು ತಡೆಗಟ್ಟಲು ಕ್ರಮ ವಹಿಸಲು ಸೂಚಿಸಿದ ಅವರು, ನಗರದ 8 ವಲಯಗಳಲ್ಲಿ ಮ್ಯಾನ್ ಹೋಲ್‍ಗಳನ್ನು ಮುಚ್ಚಬೇಕು. ಜೆಟ್ಟಿಂಗ್ ಮೆಶೀನ್‍ಗಳು ಲಭ್ಯವಿರಬೇಕು ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಬೆಂಗಳೂರು ನಗರದ ಎಲ್ಲ ಎಂಟು ವಲಯಗಳಲ್ಲಿ ಬಿ.ಬಿ.ಎಂ.ಪಿ, ಬೆಸ್ಕಾಂ, ಒಳಚರಂಡಿ ಮಂಡಳಿ ಹಾಗೂ ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳನ್ನು  ಒಳಗೊಂಡ ತಂಡವನ್ನು ರಚಿಸಿ ಮಳೆ ಸಂಬಂಧಿ ದೂರುಗಳು ಬಂದಲ್ಲಿ ತಕ್ಷಣವೇ ಕ್ರಮವಹಿಸಬೇಕು ಎಂದರು.  ಅನಾಹುತಗಳು ಸಂಭವಿಸಿದಲ್ಲಿ  ಸಹಾಯಕ ಅಭಿಯಂತರರನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದರು. 

ಸಚಿವ ಭೈರತಿ ಬಸವರಾಜ್, ಮುಖ್ಯ ಕಾರ್ಯದರ್ಶಿ ಟಿ.ಯೆಂ.ವಿಜಯಭಾಸ್ಕರ್,  ಬಿ.ಬಿ.ಎಂ.ಪಿ.ಆಯುಕ್ತ ಬಿ.ಹೆಚ್ .ಅನಿಲ್ ಕುಮಾರ್,  ಬೆಂಗಳೂರು ನಗರ ಪೋಲೀಸ್ ಆಯುಕ್ತ ಭಾಸ್ಕರ್ ರಾವ್,  ನಗರಾಭಿವೃದ್ಧಿ ಇಲಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಉಪಸ್ಥಿತರಿದ್ದರು. 

Recent Posts

ರಾಜಕೀಯ

ಜನರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ; HDK ಕಿಡಿ| Video

ಜನರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ; HDK ಕಿಡಿ| Video

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳ ಸುತ್ತ ಗಿರಕಿ ಹೊಡೆಯುತ್ತಿದೆಯೇ ಹೊರತು, ಹಿಂಗಾರು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HDK)

[ccc_my_favorite_select_button post_id="93529"]
ರಾಜಮನೆತನಕ್ಕೆ ದಸರಾ ಅಧಿಕೃತ ಆಹ್ವಾನ

ರಾಜಮನೆತನಕ್ಕೆ ದಸರಾ ಅಧಿಕೃತ ಆಹ್ವಾನ

ಮೈಸೂರು; ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಬರುವಂತೆ ಜಿಲ್ಲಾಡಳಿತದಿಂದ ಭಾನುವಾರ ಸಂಜೆ ಅಧಿಕೃತವಾದ ಆಹ್ವಾನವನ್ನು ಮೈಸೂರಿನ ರಾಜವಂಶಸ್ಥರಿಗೆ ನೀಡಲಾಯಿತು. ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಅರಮನೆಯ

[ccc_my_favorite_select_button post_id="93086"]
ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ!: ಪಾರ್ಕಿಂಗ್ ಹೆಚ್ಚಳ, ರಸ್ತೆ ದುರಸ್ತಿ ಕೇರಳ ಸರ್ಕಾರ ಕ್ರಮ

ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ!: ಪಾರ್ಕಿಂಗ್ ಹೆಚ್ಚಳ, ರಸ್ತೆ ದುರಸ್ತಿ

ತಿರುವನಂತಪುರ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶಬರಿಮಲೆ (Shabarimale) ದೇಗುಲದ ವಾರ್ಷಿಕ ಮಂಡಲಂ- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

[ccc_my_favorite_select_button post_id="93522"]
ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್

ಬೆಳಗಾವಿ, (ಸೆ.9): ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ

[ccc_my_favorite_select_button post_id="89581"]

ಕ್ರೀಡೆ

Doddaballapura: ಎಂಆರ್ ಇಲೆವೆನ್ ತಂಡಕ್ಕೆ ಸ್ನೇಹಲೋಕ ಕಪ್..!

Doddaballapura: ಎಂಆರ್ ಇಲೆವೆನ್ ತಂಡಕ್ಕೆ ಸ್ನೇಹಲೋಕ ಕಪ್..!

ದೊಡ್ಡಬಳ್ಳಾಪುರ: ಇತ್ತೀಚಿಗೆ ತಾಲೂಕಿನ ಮಧುರೆ ಹೋಬಳಿ ಕನಸವಾಡಿ ಮತ್ತು ಕನ್ನಮಂಗಲ ಮೈದಾನದಲ್ಲಿ ಆಯೋಜಿಸಿದ್ದ ಸ್ನೇಹಲೋಕ ಕಪ್- ಸೀಸನ್ 4ರ ಕ್ರಿಕೆಟ್ ಟೂರ್ನಿಯಲ್ಲಿ ಮಾರಸಂದ್ರದ ಎಂಆರ್ ಇಲೆವೆನ್ ತಂಡ ಪ್ರಥಮ ಸ್ಥಾನವನ್ನು ಪಡೆದು ಸ್ನೇಹಲೋಕ ಕಪ್

[ccc_my_favorite_select_button post_id="93285"]
ಕಾವೇರಿ ನದಿಗೆ ಹಾರಿ ದೊಡ್ಡಬಳ್ಳಾಪುರ ಮೂಲದ ಯುವಕ ಆತ್ಮಹತ್ಯೆ..!| Suicide

ಕಾವೇರಿ ನದಿಗೆ ಹಾರಿ ದೊಡ್ಡಬಳ್ಳಾಪುರ ಮೂಲದ ಯುವಕ ಆತ್ಮಹತ್ಯೆ..!| Suicide

ಕೊಳ್ಳೇಗಾಲ: ಮನೆಯಲ್ಲಿ ನಿತ್ಯ ಪೋಷಕರ ಜಗಳದಿಂದ ಬೇಸತ್ತ ಮಗ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ (Suicide) ಘಟನೆ ತಾಲೂಕಿನ ಶಿವನಸಮುದ್ರದ ಬಳಿ ಜರುಗಿದೆ. ಬೆಂಗಳೂರಿನ ನಾಯಂಡಳ್ಳಿ ನಿವಾಸಿ ಶಿವಸ್ವಾಮಿ ಎಂಬುವರ ಪುತ್ರ 26 ವರ್ಷ ಸಂದೀಪ್ ಕುಮಾರ್ ಮೃತ ಯುವಕ. ಮೂಲತಹಃ

[ccc_my_favorite_select_button post_id="93487"]
Accident; ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ.. ನಾಲ್ವರ ಸ್ಥಿತಿ ಗಂಭೀರ

Accident; ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ.. ನಾಲ್ವರ ಸ್ಥಿತಿ ಗಂಭೀರ

ಕೊರಟಗೆರೆ: ಖಾಸಗಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ (Accident) ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಇರಕಸಂದ್ರ ಕಾಲೋನಿ ಬಳಿಯಿರುವ ವಡ್ಡರಹಳ್ಳಿ ಸಮೀಪ ನಡೆದಿದೆ. ಖಾಸಗಿ ಬಸ್ ತುಮಕೂರು

[ccc_my_favorite_select_button post_id="93502"]

ಆರೋಗ್ಯ

ಸಿನಿಮಾ

ನಿಜವಾಗುತ್ತಿದೆ ಅಭಿಮಾನಿಗಳ ನಂಬಿಕೆ.. Darshan ಪರ ವಕೀಲರ ವಾದಕ್ಕೆ ಕೆಲ ಖಾಸಗಿ ಸುದ್ದಿ ವಾಹಿನಿಗಳು ಕಕ್ಕಾಬಿಕ್ಕಿ

ನಿಜವಾಗುತ್ತಿದೆ ಅಭಿಮಾನಿಗಳ ನಂಬಿಕೆ.. Darshan ಪರ ವಕೀಲರ ವಾದಕ್ಕೆ ಕೆಲ ಖಾಸಗಿ ಸುದ್ದಿ

ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan ) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಅಕ್ಟೋಬರ್.8ಕ್ಕೆ ಮುಂದೂಡಿದೆ. ಪ್ರಸಾರವಾದ ಕಲಾಪದ

[ccc_my_favorite_select_button post_id="93494"]
error: Content is protected !!