ದೊಡ್ಡಬಳ್ಳಾಪುರ : ನವೋದಯ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಮಾನಸಿಕ ಅರೋಗ್ಯ ವಿಭಾಗ ಬೆಂಗಳುರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ವಿಶ್ವ ತಂಬಾಕು ದಿನದ ಅಂಗವಾಗಿ.ಭಾನುವಾರ ಆನ್ಲೈನ್ ವೆಬಿನಾರ್ ಮೂಲಕ ಯುವಜನತೆಗೆ ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತು.
ಜಿಲ್ಲಾ ಮನೋವೈದ್ಯರಾದ ಡಾ|| ಗಿರೀಶ್, CFTFK ಸಂಸ್ಥೆಯ ಸಂಸ್ಥಾಪನ ಕಾರ್ಯಾದರ್ಶಿ S . J .ಚಂದರ್ ಮತ್ತು ಪರಿಸರವಾದಿ ರಾಘವೇಂದ್ರ ಪ್ರಸಾದ್.ಬಿ.ಟಿ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯುವ ಸಮಾಜಕ್ಕೆ ವಿಷಯ ಮಂಡಿಸಿದರು.
ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ,ಜಿಲ್ಲೆಯಾದ್ಯಂತ ಇಲಾಖೆಯ ವತಿಯಿಂದ ಆದಷ್ಟು ಮಟ್ಟಿಗೆ ತಂಬಾಕು ಸೇವನೆ ತಡೆಗಟುವ ಕಾರ್ಯವನ್ನು ಕೈಗೊಂಡಿದ್ದೇವೆ ಇನ್ನು ಹೆಚ್ಚಿನ ರೀತಿಯಲ್ಲಿ ತಡೆಗಟ್ಟಲು ಯುವ ಟಾಸ್ಕ್ ಫೋರ್ಸ್ ನಿರ್ಮಾಣ ಆಗಬೇಕಾಗಿದೆ ಎಂದು ತಿಳಿಸಿದರು.
ನವೋದಯ ಟ್ರಸ್ಟ್ ನ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ,ತಂಬಾಕು ಎಂಬ ಮಹಾಮಾರಿಗೆ ಇತೀಚಿನ ದಿನಗಳಲ್ಲಿ ಯುವ ಜನತೆ ಶೋಕಿಗಾಗಿ ಕಲಿತ ಹವ್ಯಾಸ ಮುಂದೆ ಚಟವಾಗಿ ಪರಿವರ್ತನೆ ಹೊಂದಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮರಣಾಂತಿಕ ಖಾಯಿಲೆಗೆ ತುತ್ತಾಗುತ್ತಿದ್ದಾರೆ ಆದ ಕಾರಣ ತಂಬಾಕು ನಿಯಂತ್ರಣ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಶಕುಂತಲಾ ಸ್ಯಾಮ್ಯುಯೆಲ್ಸನ್,ಜಿಲ್ಲಾ ಮಾನಸಿಕ ಅರೋಗ್ಯ ಅಧಿಕಾರಿಗಳಾದ ಡಾ.ಶಾಂತಲ,ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನಾ.ಕೆ.ಭಟ್, NSS ವಿಭಾಗದ ಕಾರ್ಯಕ್ರಮ ಅಧಿಕಾರಿ ಗಿರೀಶ್,ನವೋದಯ ಟ್ರಸ್ಟ್ ನ ಪದಾಧಿಕಾರಿಗಳು,,ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು NSS ವಿದ್ಯಾರ್ಥಿಗಳು ಭಾಗವಹಿಸಿದ್ದರು.