ದೊಡ್ಡಬಳ್ಳಾಪುರ : ಅವಧಿ ಪೂರ್ಣಗೊಂಡಿರುವ ಗ್ರಾಮಪಂಚಾಯಿತಿಗಳು ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡಬಾರದೆಂದು ಹರಿತಲೇಖನಿಗೆ ದೊರೆತ ಆದೇಶ ಪತ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪನಿರ್ದೇಶಕ ಬಿ.ನವೀನ್ ಕುಮಾರ್ ಆದೇಶಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು,ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 41ರಂತೆ ಗ್ರಾಮಪಂಚಾಯಿತಿ ಸದಸ್ಯರ ಅವಧಿಯು 5 ವರ್ಷಗಳಿಗೆ ನಿಗಧಿಪಡಿಸಿದ್ದು,ಪ್ರಕರಣ 42 ರಲ್ಲಿ ಗ್ರಾಮಪಂಚಾಯಿತಿ ಸದಸ್ಯರ ಹುದ್ದೆಯ ಅವಧಿಯು ಗ್ರಾಮಪಂಚಾಯಿತಿಯ ಪ್ರಥಮ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ ಪ್ರಾರಂಭವಾಗಿ 5ವರ್ಷಗಳ ಅವಧಿ ಪೂರ್ಣಗೊಂಡಿರುವ ಗ್ರಾಮಪಂಚಾಯಿತಿಗಳು ಸರ್ಕಾರದ ಮುಂದಿನ ನಿರ್ದೇಶನದವರೆಗೆ ಯಾವುದೇ ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡಬಾರದೆಂದು ತಿಳಿಸಿದ್ದಾರೆ.