ದೊಡ್ಡಬಳ್ಳಾಪುರ : ವಿಧಾನಸೌಧಕ್ಕೆ ಹೊರಟಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ
ಶಾಲೆಗಳನ್ನು ಕರೊನಾ ಹೋದ ನಂತರ ಆರಂಭಿಸುವಂತೆ ಪುಟಾಣಿ ಮಹನ್ಯಾ ಆತ್ಮೀಯ ಸೂಚನೆ ನೀಡಿದ್ದಾಳೆ.
ಗುರುವಾರ ಬೆಳಗ್ಗೆ ವಿಧಾನಸೌಧಕೆ ತೆರಳುತ್ತಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರೊಂದಿಗೆ ಶಾಲೆಯ ಆರಂಭದ ಕುರಿತು ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದಾಳೆ, ಆಕೆಯೊಂದಿಗೆ ಮುಕ್ತ ಮಾತುಕತೆ ನಡೆಸಿರುವ ಸುರೇಶ್ ಕುಮಾರ್.ಆಕೆಯೊಂದಿಗಿನ ಮಾತುಕತೆಯ ಪೋಟೋ ಹಂಚಿಕೊಂಡು,ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಸಂದೇಶ ಈ ಕೆಳಕಂಡತಿದೆ.
ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು.
ಈ young friend ಬಂದು ನನ್ನೆದುರು ನಿಂತಳು.
“ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ” ಎಂದಳು ಮಹನ್ಯಾ ಎಂಬ ಈ ಬಾಲೆ.
“ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ” ಎಂದು ಕೇಳಿದಳು.
” ಯಾವಾಗ ಶುರು ಮಾಡಬೇಕು?” ಎಂಬ ನನ್ನ ಪ್ರಶ್ನೆಗೆ “ಕೊರೋನಾ ಹೋದ ಮೇಲೆ” ಎಂದಳು First Std ಓದುತ್ತಿರುವ ಈ ಚಿನ್ನಾರಿ.
“ತುಂಬಾ ದಿನ ಕೊರೋನಾ ಹೋಗದಿದ್ದರೆ” ಎಂದು ನಾನು ಪ್ರಶ್ನಿಸಿದ್ದಕ್ಕೆ “ಇಲ್ಲ. ಕೊರೋನಾ ಹೋದ ಮೇಲೇ ಓಪನ್ ಮಾಡಿ” ಎಂದಳಾ ಪೋರಿ.
“ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ” ಎಂಬ ನನ್ನ ಪ್ರಶ್ನೆಗೆ “ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ” ಎಂದು ಬೀಗುತ್ತಾ ನುಡಿದಳು ಮಹನ್ಯಾ.
ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.