ದೊಡ್ಡಬಳ್ಳಾಪುರ : ಛತ್ರಪತಿ ಶಿವಾಜಿ ಪಟ್ಟಾಭಿಷೇಕ ದಿನದ ಅಂಗವಾಗಿ ನಗರದ ಹೊರವಲಯದ ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿನ ಶಿವಾಜಿ ಪುತ್ತಳಿಗೆ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಬಜರಂಗದಳ ತುಮಕೂರು ವಿಭಾಗ ಸಂಚಾಲಕ ನರೇಶ್ ರೆಡ್ಡಿ,ತಾಲ್ಲೂಕ ಸಂಚಾಲಕ ಭಾಸ್ಕರ್ ಭಗತ್,ತಾಲ್ಲೂಕು ಸಹ ಸಂಚಾಲಕ್ ವಿರಾಟ್,ಸದಸ್ಯರಾದ ಭಾನು ಪ್ರಕಾಶ್,ಕುಶಾಲ್, ಸತೀಶ್,ಪಣೀಶ್ ಮತ್ತಿತರಿದ್ದರು.