ದೊಡ್ಡಬಳ್ಳಾಪುರ : ತಾಲೂಕಿನ ಎಸ್ ಎಸ್ ಘಾಟಿ( ಮೇಲಿನ ಜೂಗನಹಳ್ಳಿ) ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತಿ,ತಾಲೂಕು ಪಂಚಾಯ್ತಿ , ರಾಷ್ಟ್ರೋತ್ಥಾನ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ್ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು,ಗಿಡಗಳನ್ನು ನೆಡುವುದಷ್ಟೇ ಅಲ್ಲ ಅವುಗಳನ್ನು ಉಳಿಸುವುದು ಬೆಳೆಸುವುದು ಸಹ ಪ್ರಮುಖವಾದದ್ದು. ಹಾಗೆಯೇ ಗ್ರಾಮಪಂಚಾಯಿತಿಗಳಲ್ಲಿ ಹಾಗೂ ಇತರೆ ಅನುಷ್ಠಾನ ಇಲಾಖೆಯವರು ಪ್ರತಿಯೊಬ್ಬ ರೈತರಿಗೂ ನರೇಗಾ ಯೋಜನೆಯ ಮೂಲಕ ಗಿಡಗಳನ್ನು ನೆಟ್ಟು ಉಳಿಸಿ,ಬೆಳೆಸಬೇಕು.ಇದರಿಂದ ಪರಿಸರವನ್ನು ಉಳಿಸಿ ಬೆಳೆಸಿದಂತಾಗುತ್ತದೆ, ಮಳೆ ಹೆಚ್ಚಾಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಇದರ ಪರಿಣಾಮವಾಗಿ ಗ್ರಾಮೀಣ ಭಾಗದ ರೈತರ ಬದುಕು ಹಸನಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯಮಾತನಾಡಿ,ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಜಾಗಗಳಲ್ಲಿ,ಗುಂಡುತೋಪು,ಸ್ಮಶಾನ ಸರ್ಕಾರಿ ಆಸ್ಪತ್ರೆ ಜಾಗದಲ್ಲಿ ಪ್ರತಿ ಗ್ರಾಮ ಪಂಚಾಯತಿಯ ಕನಿಷ್ಠ ಐದು ನೂರು ಸಸಿಗಳನ್ನು ನೆಟ್ಟು ಪೋಷಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ನೀಡಿರುವ ಸಸಿಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಮೂಲಕ ನಡೆಸಿ ಸರಳವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಲಯ ಅರಣ್ಯ ಅಧಿಕಾರಿ ಗಳಾದ ಭಾಸ್ಕರ್, ತಾಲೂಕು ಅರಣ್ಯಾಧಿಕಾರಿ ಲಷ್ಕರ್ ನಾಯಕ್,ತಾಪಂ ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ,ರಾಷ್ಟ್ರೋತ್ಥಾನ ಪರಿಷತ್ತಿನ ಸದಸ್ಯರಾದ ಜೀವನ್ ಕುಮಾರ್,ಚಂದ್ರು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಭೈರಪ್ಪ,ಕೃಷ್ಣಯ್ಯ,ಚನ್ನಪ್ಪ ಮತ್ತಿತರಿದ್ದರು.