ದೊಡ್ಡಬಳ್ಳಾಪುರ: ಕೋವಿಡ್ 19 ಲಾಕ್ ಡೌನ್ ಘೊಷಣೆ ಹಿನ್ನೆಲೆಯಲ್ಲಿ ಮುಚ್ಚಲಾದ ಜಿಮ್ ಗಳನ್ನು ತೆರೆಯಲು ಅನುಮತಿ ನೀಡುವಂತೆ ಫಿಟ್ನೆಸ್ ಪೇವರ್ ಜೀಮ್ ವತಿಯಿಂದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರದ ಜಿಮ್ ಗಳನ್ನು ಲಾಕ್ ಡೌನ್ ಘೋಷಣೆ ಕಾರಣ,ಕಳೆದ ಮಾರ್ಚ್ ತಿಂಗಳಿನನಿಂದ ಮುಚ್ಚಲಾಗಿದೆ.ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯನ್ವಯ ಜಿಮ್ ಗಳನ್ನು ತೆರೆಯಲು ಅನುವು ಮಾಡಿಕೋಟ್ಟಲ್ಲಿ,ಸರ್ಕಾರದ ನಿಯಮಾನ್ವಯ ಕಡ್ಡಾಯವಾಗಿ ಮಾಸ್ಕ್,ಸ್ಯಾನಿಟೈಸರ್,ಸಮಾಜಿಕ ಅಂತರ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜಿಮ್ ನಡೆಸುವುದಾಗಿ ಫಿಟ್ನೆಸ್ ಪೇವರ್ ಜೀಮ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ವೇಳೆ ಜೆಡಿಎಸ್ ಯುವ ಘಟಕದ ಸದಸ್ಯ ಮುಜಾಹೀದ್ ಶೇಕ್,ಇಮ್ರಾನ್ ಷರೀಫ್, ಬಾಬಾ ಜಾನ್ ಮತ್ತಿತರರಿದ್ದರು.