ಬೆಂಗಳೂರು: ಜೂನ್ 19ರಂದು ನಾಲ್ಕು ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆದರೆ ಬಿಜೆಪಿ ಹೈಕಮಾಂಡ್ ಆಯ್ಕೆ ಕಂಡು ರಾಜ್ಯ ನಾಯಕರು ಅಚ್ಚರಿಗೊಂಡಿದ್ದಾರೆ.
ರಾಜ್ಯಸಭೆಗೆ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಬಿಜೆಪಿ ಅಭ್ಯರ್ಥಿಗಳು
ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಅಶೋಕ್ ಗಸ್ತಿ ಹಾಗೂ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಈರಣ್ಣ ಕಡಾಡಿ ಇವರನ್ನು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ರಾಜ್ಯ ಬಿಜೆಪಿ ಕಳಿಸಿದ ಲಿಸ್ಟ್ ಗೆ ಹೈಕಮಾಂಡ್ ತಿರಸ್ಕರಿಸಿ, ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿದೆ.
ರಾಯಚೂರಿನ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು. ಹಾಗೂ ಬೆಳಗಾವಿಯ ಈರಣ್ಣ ಕಡಾಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ವಿಶೇಷವೆಂದರೆ ಇವರಿಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು.