ಅಯೋಧ್ಯೆ ವಿವಾದಿತ ಪ್ರದೇಶವನ್ನು ಪ್ರಾಚೀನ ಬೌದ್ಧ ಸ್ಮಾರಕ ಘೋಷಣೆ ಮಾಡಲು ಒತ್ತಾಯ

ದೊಡ್ಡಬಳ್ಳಾಪುರ : ಅಯೋದ್ಯೆಯ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದು ಮಾಡಿ ಈ ಪ್ರದೇಶವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ)ಮೊದಲಾದ ಸಂಘಟನೆಗಳಿಂದ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ, ಶತಮಾನಗಳ ವಿವಾದವಾಗಿದ್ದ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯ ವ್ಯಾಜ್ಯವನ್ನು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಆದರೆ  ೨,೬೦೦ ವರ್ಷಗಳ ಹಿಂದೆ ಅಯೋದ್ಯೆಯನ್ನು ಸಾಕೇತ ಎಂದು ಕರೆಯಲಾಗುತ್ತಿತ್ತು.  ವಿಹಾರ ದ್ವಂಸಮಾಡಿದ ಬಾಬರ್ ಅಲ್ಲಿಯೇ ಬಾಬರಿ ಮಸೀದಿ ನಿರ್ಮಿಸಿದ. ಅಕ್ಬರನ ಆಡಳಿತದಲ್ಲಿ ಬಾಬರಿ ಮಸೀದಿಯನ್ನು ನವೀಕರಣಗೊಳಿಸಿ ಹಿಂದು ಮುಸ್ಲಿಂ ಬಾವೈಕ್ಯತೆಯ ಸಂಕೇತವಾಗಿ ಅದರಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ  ಚಿನ್ಹೆಗಳನ್ನು  ಅಳವಡಿಸಿದ ಎಂದು ಇತಿಹಾಸ  ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಯುನೆಸ್ಕೋ ವತಿಯಿಂದ ನಡೆಸಿದ ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಬಾಬಾರಿ ಮಸೀದಿ ಸ್ಥಳದಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ ಚಿನ್ಹೆಗಳು ತದ ನಂತರ ಬೌದ್ಧಧಮ್ಮದ ಶಿಲ್ಪಕಲೆಗಳು ಪತ್ತೆಯಾಗಿವೆ ಎಂದು ಇಂಡಿಯಾ ಟುಡೆ ಪತ್ರಿಕೆ ತನ್ನ ವರದಿಯಲ್ಲಿ ಪ್ರಕಟಿಸಿದೆ. ಇತ್ತೀಚೆಗೆ ಬಾಬಿರಿ ಮಸೀದಿ ಅಡಿಯಲ್ಲಿ ಕಾಮಗಾರಿ ಮಾಡುವಾಗ ಹಲವಾರು ಬೌದ್ಧ ಸ್ಥೂಪಗಳು, ಬದ್ಧನ ಮೂರ್ತಿಗಳು ಸೇರಿದಂತೆ ಬೌದ್ಧ ದರ್ಮದ ನೂರಾರು ಚಿಹ್ನೆಗಳು ದೊರೆತಿದೆ.  ಜಗತ್ತಿಗೆ ಭಾರತ ಬುದ್ಧನ ಮೂಲಕ ಪರಿಚಯವಾಗಿದೆ, ಬುದ್ಧನ ಪಂಚಶೀಲಗಳು ಮಧ್ಯಮ ಮಾರ್ಗ ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದು, ನಮ್ಮ ಸಂವಿಧಾನದಲ್ಲೂ ಸಹ ಬೌದ್ಧ ದಮ್ಮದ ಲಾಂಚನಗಳು ರಾಷ್ಟ್ರೀಯ ಚಿನ್ಹೆಗಳಾಗಿ ಸೇರಿಸಲಾಗಿದೆ. ಈ ನಿಟ್ಟಿನಲ್ಲಿ  ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಈ ವಿಹಾರವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಣೆ ಮಾಡಿ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸಲಾಗುತ್ತದೆ ಎಂದರು.

ಈ ವೇಳೆ ಬುದ್ಧವಿಹಾರ ಎಜುಕೇಷನ್ ಅಂಡ್ ಸರ್ವೀಸೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಮಾಳವ ನಾರಾಯಣ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ) ಜಿ ಅದ್ಯಕ್ಷ ಹನುಮಣ್ಣ ಗೂಳ್ಯ, ಮುಖಂಡರಾದ ಎಂ.ಮುನಿಕೃಷ್ಣಪ್ಪ , ಸುರೇಶ್ ತಳಗವಾರ, ನರಸಿಂಹಮೂರ್ತಿ, ರತ್ನಮ್ಮ ಮೊದಲಾದವರು ಭಾಗವಹಿಸಿದ್ದರು.

ರಾಜಕೀಯ

ನಾಳೆಯಿಂದ ಜಂಟಿ ಅಧಿವೇಶನ; ನರೇಗಾ (MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ

ನಾಳೆಯಿಂದ ಜಂಟಿ ಅಧಿವೇಶನ; ನರೇಗಾ (MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ

ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ತಿಳಿಸಿದರು

[ccc_my_favorite_select_button post_id="118671"]
88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ

88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ

ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ತಿಳಿಸಿದರು.

[ccc_my_favorite_select_button post_id="118559"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಪ್ರೋತ್ಸಾಹ ಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಪ್ರೋತ್ಸಾಹ ಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

2024ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಂದ (Athletes) ಪ್ರೋತ್ಸಾಹ ಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118551"]
ದೊಡ್ಡಬಳ್ಳಾಪುರ: ಸೀರೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ಸೀರೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ..!

ಸುಮಾರು 21 ವರ್ಷದ ಯುವಕನೋರ್ವ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ ನಗರದ ಕುಚ್ಚಪ್ಪನ ಪೇಟೆಯಲ್ಲಿ ನಡೆದಿದೆ.

[ccc_my_favorite_select_button post_id="118648"]
ಸುತ್ತೂರು ಜಾತ್ರೆ: ಕಾರು ಹರಿದು ನಿದ್ರೆಯಲ್ಲಿದ್ದ ಭಕ್ತ ಸಾವು

ಸುತ್ತೂರು ಜಾತ್ರೆ: ಕಾರು ಹರಿದು ನಿದ್ರೆಯಲ್ಲಿದ್ದ ಭಕ್ತ ಸಾವು

ಸುತ್ತೂರು ಜಾತ್ರೆಗೆ ಬಂದು ನಾಟಕ ವೀಕ್ಷಿಸಿ ಗದ್ದುಗೆ ಬಳಿ ಮಲಗಿದ್ದ ಭಕ್ತರ ಮೇಲೆ ಕಾರು ಹರಿದು ಒಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯ ಗೊಂಡಿರುವ ಘಟನೆ (Accident) ಬಿಳಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="118669"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!