ಬೆಂಗಳೂರು : ಎಲ್ಕೆಜಿಯಿಂದ 5ನೇ ತರಗತಿ ತನಕ ಆನ್ಲೈನ್ ತರಗತಿ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದ ಬೆನ್ನಲ್ಲೇ. ಇಂದು ಮತ್ತೆ ಸರ್ಕಾರ ತನ್ನ ನಿರ್ಧಾರ ಬದಲಿಸಿದ್ದು 5ನೇ ತರಗತಿ ತನಕವಲ್ಲದೆ 7ನೇ ತರಗತಿ ತನಕ ಆನ್ಲೈನ್ ಕ್ಲಾಸ್ ರದ್ದು ಮಾಡಲು ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು 1 ರಿಂದ 5 ರವರೆಗೆ ಆನ್ಲೈನ್ ಶಿಕ್ಷಣ ಬೇಡ ಎಂದು ಈ ಮೊದಲು ನಿರ್ಧರಿಸಲಾಗಿತ್ತು.ಇಂದು ಮತ್ತೆ ಚರ್ಚೆ ಬಳಿಕ ಈ ರದ್ದತಿಯನ್ನು 7ನೇ ತರಗತಿ ತನಕ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಈ ಮೊದಲೆ ನಿರ್ಧರಿಸಿದಂತೆ SSLC ಪರೀಕ್ಷೆ ನಡೆಯಲಿದೆ. 8 ಹಾಗೂ 9 ತರಗತಿಯವರಿಗೆ ಆನ್ ಲೈನ್ ಕ್ಲಾಸ್ ನಡಿತಿದೆ .ಇದನ್ನೂ ನಿಲ್ಲಿಸಬೇಕಾ, ಬೇಡ್ವಾ? ಅನ್ನೊದ್ರ ಚರ್ಚೆ ನಡೆದಿದೆ ಎಂದಿದ್ದಾರೆ.
*************************