ದೊಡ್ಡಬಳ್ಳಾಪುರ: ಕೋವಿಡ್-19ರ ಪರಿಣಾಮದಿಂದಾಗಿ ಜಿಲ್ಲೆಯ ಹಲವು ಕೈಗಾರಿಕೆಗಳಲ್ಲಿ ಮತ್ತು ಸೇವಾವಲಯದಲ್ಲಿ ಹಲವಾರು ಕಾರ್ಮಿಕರು ವಲಸೆ ಹೋಗಿರುವುದರಿಂದ, ಕಾರ್ಮಿಕರು ಮತ್ತು ಉದ್ಯೋಗಿಗಳ ಕೊರತೆ ಉಂಟಾಗಿರುವುದು ಕಂಡುಬಂದಿರುವ ಹಿನ್ನೆಲೆ, ಜಿಲ್ಲೆಯಲ್ಲಿರುವ ಕೈಗಾರಿಕಾ ಮತ್ತು ಸೇವಾಕ್ಷೇತ್ರಗಳಲ್ಲಿ ಉಂಟಾಗಿರುವ ಕಾರ್ಮಿಕರ/ಉದ್ಯೋಗಿಗಳ ಕೊರತೆ ಕುರಿತು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸಮೀಕ್ಷೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿರುವ ಎಲ್‌ಎಸ್‌ಐ(LSI), ಎಂಎಸ್‌ಐ(MSI), ಎಸ್‌ಎಸ್‌ಐ(SSI) ಮತ್ತು ಸೇವಾ ವಲಯ(Service Sector)ಗಳು ತಮ್ಮ ಕೈಗಾರಿಕೆಗಳಲ್ಲಿ ಕಾರ್ಮಿಕರ ವಲಸೆಯಿಂದ ಉಂಟಾಗಿರುವ ಕೊರತೆ ಮತ್ತು ಅವಶ್ಯವಿರುವ ಕಾರ್ಮಿಕರು/ಉದ್ಯೋಗಿಗಳ ಬಗ್ಗೆ ಮತ್ತು ತಮ್ಮ ಕೈಗಾರಿಕೆಗಳಿಗೆ ಯಾವ ವೃತ್ತಿಯಲ್ಲಿ ತರಬೇತಿ ಹೊಂದಿದ ಕಾರ್ಮಿಕರ/ಉದ್ಯೋಗಿಗಳ ಅವಶ್ಯಕತೆ ಇದೆ ಎಂಬುದನ್ನು ತಿಳಿಸಲು ಕೋರಿದೆ.
ಕೈಗಾರಿಕೆ/ಸೇವಾಕ್ಷೇತ್ರದಲ್ಲಿ ಅನುಭವ ಮತ್ತು ಪರಿಣಿತಿ ಹೊಂದಿರುವವರು ತಮ್ಮ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದಲ್ಲಿ ವಲಸೆ ಕಾರ್ಮಿಕರಿಗೆ ಇಲಾಖೆಯಿಂದ ಉದ್ಯೋಗ/ತರಬೇತಿ ನೀಡಲು ಅನುಕೂಲಕರವಾಗಿರುತ್ತದೆ
ಮಾಹಿತಿಯನ್ನು Email: dsdobngrural@gmail.com ಗೆ ಕಳುಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.