ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ದಿನಸಿ ಕಿಟ್ಗಳನ್ನ ರೀಫಾರೆಸ್ಟ್ ಇಂಡಿಯಾ ಸಂಸ್ಥೆಯ ವತಿಯಿಂದ ಗ್ರಾಮದ ಕುುುಟುಂಬಗಳಿಗೆ ಉದ್ಯಮಿ ಗೀತಾ ವಿತರಿಸಿದರು.
ಇದೇ ವೇಳೆ ಗ್ರಾಮದ ಮಹಿಳೆಯರಿಗೆ ರೀಯೂಸಬಲ್ ಕಾಟನ್ ಸ್ಯಾನಿಟೈಸರ್ ಪ್ಯಾಡನು ವಿತರಿಸಲಾಯಿತು.
ಉದ್ಯಮಿ ಗೀತಾ ಮಾತನಾಡಿ,ಕರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತೆಯೊಂದೆ ಪರಿಹಾರವಾಗಿದ್ದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಗ್ರಾಮೀಣ ಜನತೆ ತಪ್ಪದೆ ಪಾಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೀಫಾರೆಸ್ಟ ಇಂಡಿಯಾ ಸಂಸ್ಥೆಯ ಜಾನೆಟ್ ಯಜ್ಞೇಶ್ವರ್,ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ರಾಘವೇಂದ್ರ ಪ್ರಸಾದ್, ನಿವೃತ್ತ ಮುಖ್ಯ ಶಿಕ್ಷಕ ಬಿ.ಮುದ್ದಯ್ಯ,ಮುಖಂಡರಾದ
ಎಂ.ಎಲ್.ಶ್ರೀರಾಮಯ್ಯ,ಮಂಜುನಾಥ್, ತಿಮ್ಮಯ್ಯ,ನಾಗೇಂದ್ರ,ಅಭಿಲಾಷ್,ಬಿ.ಜಿ.ದರ್ಶನ್,ಸುದೀಪ್,ನಿಶ್ಚಲ್, ಬಿ.ಆರ್.ಭವಿಷ್ಯ ಮತ್ತಿತರಿದ್ದರು.
*****