ದೊಡ್ಡಬಳ್ಳಾಪುರ: ಲಡಾಖ್ ಗಡಿಯಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ.ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಬುಧವಾರ ಸಂಜೆ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ. ಮಕ್ಕಳೊಂದಿಗೆ ದಂಪತಿಗಳಿಬ್ಬರು ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು ಗಮನ ಸೆಳೆಯಿತು.
ಈ ವೇಳೆ ತುಮಕೂರು ವಿಭಾಗ ಸಂಚಾಲಕ ನರೇಶ್ ರೆಡ್ಡಿ ಮಾತನಾಡಿ,ಗಡಿ ಖ್ಯಾತೆ ತೆಗೆದಿರುವ ಚೀನಾಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ.ಆದರೆ ನಮ್ಮ ಯೋಧರು ಹುತಾತ್ಮರಾಗಿರುವುದು ನೋವಿನ ವಿಷಯ. ಗಡಿಯಲ್ಲಿ ಯುದ್ದದ ಕಾರ್ಮೋಡ ಉಂಟಾಗಿದೆ,ಯಾವುದೇ ಸಂದರ್ಭ ಎದುರಾದರು ದೇಶದ ಯುವ ಜನತೆ ಸೈನ್ಯದ ಪರವಾಗಿ ಹೋರಾಡಲು ಸಿದ್ದವಾಗಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಮಧು ಬೇಗಲಿ,ತಾಲೂಕು ಸಂಚಾಲಕ ಭಾಸ್ಕರ್ ಭಗತ್,ನಗರ ಸಂಚಾಲಕ ಗಿರೀಶ್,ಕಾರ್ಯಕರ್ತರಾದ ಭಾನುಪ್ರಕಾಶ್,ಫಣೀಶ್,ತೇಜಸ್,ಸುಮಂತ್ ಮತ್ತಿತರಿದ್ದರು.