ದೊಡ್ಡಬಳ್ಳಾಪುರ: ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್ ಗುಂಗೀರ್ಲಹಳ್ಳಿ ಬಳಿ ಒಡೆದಿದ್ದು ಅಪಾರ ಪ್ರಮಾಣದ ನೀರು ಪೋಲಾಗಿದೆ.
ಪೈಪ್ನಲ್ಲಿನ ವೆಲ್ಡಿಂಗ್ ಬಿಟ್ಟ ಕಾರಣ ಡಾಂಬರ್ ರಸ್ತೆಯನ್ನು ಸೀಳೆ ನೀರು ಕಾರಂಜಿಯಂತೆ ಚಿಮ್ಮಿದ್ದು,ನೂರಾರು ಲೀಟರ್ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ದುರಸ್ತಿಗೆ ಕ್ರಮ – ರಾಮೇಗೌಡ
ಪೈಪ್ನಲ್ಲಿನ ವೆಲ್ಡಿಂಗ್ ಬಿಟ್ಟ ಕಾರಣ ನೀರು ರಸ್ತೆಯಿಂದ ಹೊರಬಂದಿದೆ ಎನ್ನಲಾಗಿದ್ದು,ವಿಷಯ ತಿಳಿದ ಕೂಡಲೆ ನೀರು ಸರಬರಾಜು ನಿಲ್ಲಿಸಲಾಗಿದ್ದು ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ನಗರಸಭೆ ನೀರು ಸರಬರಾಜು ಎಇಇ ರಾಮೇಗೌಡ ಹರಿತಲೇಖನಿಗೆ ತಿಳಿಸಿದ್ದಾರೆ.