ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ವರಲ್ಲಿ ಇಂದು ಕೊರೋನಾ ವೈರಾಣು ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕ ಹೊಂದಿದ್ದವರಾಗಿದ್ದಾರೆ ಹಾಗೂ ಇನ್ನಿಬ್ಬರು ಇನ್ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್ಐ) ತೊಂದರೆಯಿಂದ ಬಳಲುತ್ತಿದ್ದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ನೆಲಮಂಗಲ ತಾಲ್ಲೂಕಿನ ತಿರುಮಲಾಪುರ ಗ್ರಾಮದ ನಿವಾಸಿಯಾದ 37 ವರ್ಷದ ಮಹಿಳೆ(ಪಿ-8078), 16 ವರ್ಷದ ಬಾಲಕಿ(ಪಿ-8079), ಪಿ-7624 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ, ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿರುತ್ತದೆ.
ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಗ್ರಾಮದ 31 ವರ್ಷದ ಪುರುಷ(ಪಿ-8080) ಮತ್ತು ಆಲನಹಳ್ಳಿ ಗ್ರಾಮದ 59 ವರ್ಷದ(ಪಿ-3464) ಪುರುಷನು ಇನ್ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿರುತ್ತದೆ.
ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.