ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಚೋಗೊಂಡಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಕಂಡುಬಂದಿದ್ದು,ಕೃಷಿ ಕಾರ್ಯದಲ್ಲಿ ತೊಡಗಲು ರೈತರು ಆತಂಕ ಪಡುವಂತಾಗಿದೆ.
ನಂದಿಗಿರಿ ವ್ಯಾಪ್ತಿಯ ಬೆಟ್ಟದ ಸಾಲುಗಳಿಗೆ ಹೊಂದಿಕೊಂಡಿರುವ ಮೆಳೇಕೋಟೆ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಆತಂಕ ಹೆಚ್ಚಾಗಿದೆ.
ಮೆಳೇಕೋಟೆ ಕ್ರಾಸ್ ಸಮೀಪದ ಚೋಗೊಂಡಹಳ್ಳಿಯಲ್ಲಿ ಜಮೀನಿನಲ್ಲಿ ಕುರಿಮಂದೆಯವರು,ಕುರಿಗಳನ್ನು ಮಂದೆಹಾಕಿದ್ದು.ಸೋಮವಾರ ರಾತ್ರಿ ಈ ಕುರಿ ಮಂದೆ ಮೇಲೆ ದಾಳಿ ನಡೆಸಿರುವ ಚಿರತೆ ಕುರಿಯನ್ನು ಹೊತ್ತೊಯ್ದಿದೆ.ಇದರಿಂದಾಗಿ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ ಎಂದು ಸ್ಥಳೀಯರಾದ ಕೃಷ್ಣಮೂರ್ತಿ(ಕಿಟ್ಟಿ)ಹರಿತಲೇಖನಿಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಈ ವ್ಯಾಪ್ತಿಯಲ್ಲಿ ಎರಡು ಚಿರತೆಗಳಿರುವುದನ್ನು ಕುರಿಗಾಹಿಗಳು ಕಂಡಿದ್ದು, ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.