ದೊಡ್ಡಬಳ್ಳಾಪುರ: ಹಲಸಿನ ಹಣ್ಣಿನ ಮರ ನೋಡಲು ತಾಲ್ಲೂಕಿನ ಆರೂಢಿ ಗ್ರಾಮದ ಬಳಿ ರೈತರ ತೋಟಕ್ಕೆ ಬಂದಿದ್ದ ವ್ಯಕ್ತಿಯೋರ್ವ ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಮೃತನನ್ನು ಗೌರಿಬಿದನೂರು ತಾಲ್ಲೂಕಿನ ಪೊತೇನಹಳ್ಳಿ ನಿವಾಸಿ ನಂಜುಂಡಪ್ಪ(55) ಎಂದು ಗುರುತಿಸಲಾಗಿದೆ.ಹಲಸಿನ ಹಣ್ಣುಗಳ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ.ಮೃತನು ಬುಧವಾರ ಹಲಸಿನ ಹಣ್ಣಿನ ಮರವನ್ನು ನೋಡಲು ಪೊತೇನಹಳ್ಳಿಯಿಂದ ದ್ವಿಚಕ್ರವಾಹನಲ್ಲಿ ಬಂದಿದ್ದು, ಮರಳಿ ಊರಿಗೆ ತೆರಳು ದ್ವಿಚಕ್ರವಾಹನದ ಬಳಿ ತೆರಳುವ ವೇಳೆಯಲ್ಲಿ ಕುಸಿದು ಬಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.ಘಟನೆ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.