ದೊಡ್ಡಬಳ್ಳಾಪುರ: ತಾಲ್ಲೂಕಿನ ಕೆಸ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ,ಶಿಕ್ಷಣ ಪೌಂಢೇಶನ್ನಿಂದ ಪೋಷಕರ ಸಭೆಯನ್ನು ಆಯೋಜಿಸಿ ಕರೊನಾ ಸೋಂಕಿನ ಕುರಿತು ಅರಿವು ಮೂಡಿಸಲಾಯಿತು.
ಶಿಕ್ಷಣ ಫೌಂಡೇಶನ್ ನ ಸಹ ಸಂಯೋಜಕ ನಾರಾಯಣಸ್ವಾಮಿ ಮಾತನಾಡಿ,ವಿಶ್ವವನ್ನೇ ಕಾಡುತ್ತಿರುವ ಅತೀ ಭಯಂಕರ ರೋಗ ಕೋವಿಂಡ್ 19 ನಿಂದಾಗಿ ಮರಣ ಮೃದಂಗ ಭಾರಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಅದರ ಪರಿಣಾಮ ಕೂಡ ಭಾರತ ಎಲ್ಲಾ ರಾಜ್ಯಗಳಲ್ಲೂ ಆಗಿದ್ದು,ಕರ್ನಾಟಕ ರಾಜ್ಯ ಸರ್ಕಾರವೂ ಶಾಲೆಗಳಿಗೆ ರಜೆಯನ್ನು ಘೋಷಿದೆ. ಇದರಿಂದ ಮಕ್ಕಳ ಕಲಿಕೆ ಯ ಮೇಲೆ ಕೆಟ್ಡ ಪರಿಣಾಮ ಬೀರಿದ್ದು ತಂದೆ ತಾಯಿ ಪೋಷಕರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುವಂತಾಗಿದೆ. ಕರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತೆಯೊಂದೆ ಪರಿಹಾರವಾಗಿದ್ದು,ಪೋಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಬೇಕೆಂದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಸಹ ಶಿಕ್ಷಕಿಯರಾದ ಗೀತಾ,ಪದ್ಮ ಮತ್ತಿತರಿದ್ದರು.