ದೊಡ್ಡಬಳ್ಳಾಪುರ: ಕರೊನಾ ಆತಂಕದ ನಡುವೆಯ ಎದುರಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ನಾಳೆಯಿಂದ ಆರಂಭವಾಗುತ್ತಿದೆ.
ಪೋಷಕರು,ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರಲ್ಲಿ ಆತಂಕ ಮನೆ ಮಾಡಿದ್ದು,ಇದನ್ನು ಓಗಲಾಡಿಸಲು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಂದೇಶದ ಮೂಲಕ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರವಲ್ಲ,
ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.ಎಂಬ ಧೈರ್ಯದ ಮಾತುಗಳನ್ನಾಡುವ ಮೂಲಕ ಶುಭಕೋರಿದ್ದಾರೆ.
ಪ್ರೀತಿಯ SSLC ಮಕ್ಕಳೇ.
ನಿಮಗೆಲ್ಲಾ ಶುಭಾಶಯಗಳು.ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ.ಅದು ಕೇವಲ ನಿಮ್ಮ ಪರೀಕ್ಷಾ ಕೇಂದ್ರವಲ್ಲ,ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.ಯಾವುದೇ ಆತಂಕ ಬೇಡ. ಲವಲೇಶ ಭಯವೂ ಬೇಡ.ಬದಲಿಗೆ ಆತ್ಮವಿಶ್ವಾಸ ತುಂಬಿರಲಿ.
ನಿಮ್ಮಒಳಿತಿಗೋಸ್ಕರ ನಾವೆಲ್ಲರೂ ಅಗತ್ಯ ವ್ಯವಸ್ಥೆ ಮಾಡಿದ್ದೇವೆ.ನಿಮಗೆಲ್ಲಾ ಒಳ್ಳೆಯದಾಗಲಿ ಎಂದಿದ್ದಾರೆ.