ದೊಡ್ಡಬಳ್ಳಾಪುರ : ಮಾದಿಗ ಸಮುದಾಯದ ಸದಸ್ಯತ್ವ ನೊಂದಣಿ ಕಾರ್ಯಕ್ಕೆ ಒತ್ತು ನೀಡುವಂತೆ ಬಸವಮೂರ್ತೀ ಶಿವಶರಣ ಶ್ರೀಮಾದಾರಚನ್ನಯ್ಯ ಸ್ವಾಮಿಗಳು ಸಲಹೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಮಾದಾರ ಚನ್ನಯ್ಯ ಮಹಾ ಸಭಾದ ಪದಾಧಿಕಾರಿಗಳೊಂದಿಗೆ ಸದಸ್ಯತ್ವ ನೊಂದಣಿ ಕುರಿತು ಚರ್ಚೆ ನಡೆಸಿದ ಶ್ರೀಗಳು.
ನೋದಣಿ ಕಾರ್ಯಕ್ಕೆ ವಿಳಂಬ ಮಾಡದೆ,ತಾಲೂಕಿನಲ್ಲಿನ ಸಮುದಾಯದ ಜನತೆಯನ್ನು ನೊಂದಣಿ ಮಾಡುವ ಮೂಲಕ ಜನಾಂಗವನ್ನು ಒಂದೆ ಸೂರಿನಡಿ ತರಬೇಕೆಂದು ಸಲಹೆ ನೀಡಿದರು.
ಈ ವೇಳೆ ಶ್ರೀ ಮಾದಾರ ಚನ್ನಯ್ಯ ಮಹಾ ಸಭಾದ ತಾಲೂಕು ಉನ್ನತ ಸಮಿತಿಯ ಅಧ್ಯಕ್ಷ ಮಾ.ಮುನಿರಾಜು,ಉಪಾಧ್ಯಕ್ಷ ರಾಮಲಿಂಗಯ್ಯ,ತಾಲೂಕು ಅಧ್ಯಕ್ಷ ಅದಿತ್ಯನಾಗೇಶ್,ನಗರ ಅಧ್ಯಕ್ಷ ಅಂಜನಮೂರ್ತಿ,ಕಾರ್ಯಾಧ್ಯಕ್ಷ ನರಸಿಂಹ ಮೂರ್ತಿ,ಪ್ರಧಾನ ಕಾರ್ಯದರ್ಶಿ ಟಿ.ಡಿ.ಮುನಿಯಪ್ಪ,ಖಜಾಂಚಿ ಮಾರಪ್ಪ ಮತ್ತಿತರಿದ್ದರು.