ದೊಡ್ಡಬಳ್ಳಾಪುರ: ಇದ್ದಕ್ಕಿದ್ದಂತೆ ನಗರದಲ್ಲಿ ವ್ಯಾಪಕವಾಗುತ್ತಿರುವ ಕರೊನಾ ಸೋಂಕಿನ ಆತಂಕದ ನಡುವೆಯೇ ಎಸ್‍ಎಸ್‍ಎಲ್‍ಸಿ ಮೂರನೇ ದಿನದ ಪರೀಕ್ಷೆ ಆರಂಭವಾಗಿದೆ.
ಇಂದು ನಡೆಯುತ್ತಿರುವ ವಿಜ್ಞಾನ ಪರೀಕ್ಷೆಯಲ್ಲಿ 3400ಕ್ಕು ಹೆಚ್ಚು ವಿದ್ಯಾರ್ಥಿಗಳು ಬರೆಯುತ್ತಿದ್ದು,ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಇಒ ಬೈಯಪ್ಪರೆಡ್ಡಿ ತಿಳಿಸಿದ್ದಾರೆ.
ತೂಬಗೆರೆ ಹೋಬಳಿಯ ಲಕ್ಷ್ಮೀದೇವಿಪುರ ಸೀಲ್ಡ್ ಡೌನ್ ಹಿನ್ನೆಲೆ ಆ ವ್ಯಾಪ್ತಿಯಿಂದ ಬರುವ 7 ಮಂದಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಉಪನಿರ್ದೇಶಕ ಗಂಗಮಾರೇಗೌಡ,ಬಿಇಒ ಬೈಯಪ್ಪರೆಡ್ಡಿ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಸಲಹೆ ನೀಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಗೂ ಕಾಡುತ್ತಿದೆ ಕರೊನಾ.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭದ ನಂತರ ದೊಡ್ಡಬಳ್ಳಾಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಕರೊನಾ ಸೋಂಕು ಶಿಕ್ಷಣ ಇಲಾಖೆಗೆ ಬಹುವಾಗಿ ಕಾಡುತ್ತಿದೆ.
ಮೊದಲ ದಿನದ ಕನ್ನಡ ಪರೀಕ್ಷೆ ಸುಸೂತ್ರವಾಗಿ ನಡೆದರು,ಎರಡನೇ ದಿನದ ಗಣಿತ ಪರೀಕ್ಷೆಗೂ ಮುನ್ನ ರಾತ್ರೋರಾತ್ರಿ ಚೈತನ್ಯ ನಗರ ಶೀಲ್ಡ್ ಡೌನ್ ಹಿನ್ನೆಲೆ ಮೂರು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಭಾನುವಾರ ನಗರದ ಚಿಕ್ಕಪೇಟೆ(ಶೆಟ್ಟರಬೀದಿ)ಯಲ್ಲಿ ಉದ್ಯಮಿ ಒಬ್ಬರಿಗೆ ಸೋಂಕು ದೃಢಪಟ್ಟ ಕಾರಣ ಎಂಎಬಿಎಲ್ ಶಾಲೆಯಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಯನ್ನು ಕಾರ್ಮಲ್ ಜ್ಯೋತಿ ಶಾಲೆಗೆ ವರ್ಗಾಯಿಸಲಾಗಿದೆ.ಅಲ್ಲದೆ,ಲಕ್ಷ್ಮೀ ದೇವಿಪುರ ವ್ಯಾಪ್ತಿಯಿಂದ ಬರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗುತ್ತಿದೆ.
ಪರೀಕ್ಷೆ ಮುಗಿದ ನಂತರ ಬೀದಿ ಬದಿಯ ಜಂಕ್ ಫುಡ್ಗಳಿಗೆ ಮುಗಿ ಬೀಳಬೇಡಿ
ಶಿಕ್ಷಣ ಇಲಾಖೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಶ್ರಮಿಸುತ್ತಿದ್ದರೆ.ಪರೀಕ್ಷೆ ಮುಗಿದ ನಂತರ ಕೆಲ ಪೋಷಕರು ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ತೆರಳದೆ,ರಸ್ತೆ ಬದಿಯ ಜಂಕ್ ಫುಡ್ ಗಳಿಗೆ ಸಾಮಾಜಿಕ ಅಂತರ ಮರೆತು ಮುಗಿ ಬೀಳುತ್ತಿರುವುದು ಅಧಿಕಾರಿಗಳು,ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.ಕರೊನಾದಿಂದ ರಕ್ಷಣೆಯ ಜವಬ್ದಾರಿ ಅರಿತು ಪೋಷಕರು ವರ್ತಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.