ದೊಡ್ಡಬಳ್ಳಾಪುರದಲ್ಲಿ ಕರೊನಾ ಸೋಂಕು ಹೆಚ್ಚಾದರೆ ವಸತಿ ಶಾಲೆಗಳಲ್ಲಿ ಚಿಕಿತ್ಸೆ ಅನಿವಾರ್ಯ…!

ದೊಡ್ಡಬಳ್ಳಾಪುರ: ನಗರದ ಆಸ್ಪತ್ರೆಯಲ್ಲಿ 40 ಹಾಸಿಗಳಲ್ಲಿ ಕರೊನಾ  ಸೋಂಕು ಚಿಕಿತ್ಸೆ ನೀಡಲು ಅವಕಾಶವಿದ್ದು ಸೋಂಕು ಹೆಚ್ಚಾದರೆ ನಗರದ ಹೊರವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯತೆ ಉಂಟಾಗಲಿದೆ ಎಂದು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಿ.ಸಿ.ಶಶಿಧರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು.

ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 20 ಹಾಸಿಗೆಗಳು ಕರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಲಭ್ಯತೆಯಿದೆ,ಇನ್ನು ಇಪ್ಪತ್ತು ಹಾಸಿಗೆಗಳನ್ನು ಸಿದ್ದತೆ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾದರೆ ನಗರದ ಹೊರವಲಯದಲ್ಲಿರುವ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡಬೇಕಾಗುವುದು.ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಡಿ.ಸಿ.ಶಶಿಧರ್,ಕರೊನಾ ಸೋಂಕು ತಡೆಗೆ ತಾಲೂಕುಪಂಚಾಯಿತಿ ಸದಸ್ಯರ ಸಂಪೂರ್ಣ ಸಹಕಾರವಿದ್ದು,ತಾಪಂವತಿಯಿಂದ ಕರೊನಾ ತಡೆಗಟ್ಟಲು ಜನಜಾಗೃತಿ ಮೂಡಿಸಲಾಗುವುದೆಂದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ತಾಲೂಕುಪಂಚಾಯಿತಿಗೆ ಅನುಬಂಧಿತ ಅನುದಾನ ಎರಡು ಕೋಟಿ ಬಂದಿದ್ದು,ಸದಸ್ಯರ ಸಲಹೆಯ ‌ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುವುದೆಂದರು.

5ಲಕ್ಷ ಅನುದಾನ ಬಳಕೆಯಾಗದೆ ವಾಪಸ್…! 

ನೂತನವಾಗಿ‌ ನಿರ್ಮಿಸಲಾಗಿರುವ ಅಂಗನವಾಡಿಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮೀಸಲಾಗಿದ್ದ 5ಲಕ್ಷ ಅನುಧಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿದ್ದು,ಅಧಿಕಾರಿಗಳನ ನಡುವಿನ ಸಮನ್ವಯತೆಯ ಕೊರತೆಯೋ ಅ ಬೇಜವಬ್ದಾರಿ ಕಾರಣವೋ ಎಂದು ಸದಸ್ಯರಾದ ಶಂಕರಪ್ಪ,ನಾರಾಯಣ ಗೌಡ,ಕಣಿವೇಪುರ ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಅನುದಾನ ಸಿಗುವುದೇ ಕಷ್ಟ ಅಂತದರಲ್ಲಿ ಬಂದ ಅನುದಾನ ವಾಪಸ್ ತೆರಳಿರುವುದಕ್ಕೆ ಹೊಣೆಯಾರು ಎಂದು ನಾರಾಯಣಗೌಡ ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್,ಮಾ.31ರ ಒರೆಗೂ ಕಾಯದೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.

ಬಾಲ್ಯವಿವಾಹ ತಡೆಗೆ ಶ್ರಮಿಸಿ

ತಾಲೂಕಿನಲ್ಲಿ 11 ಬಾಲ್ಯವಿವಾಹ ತಡೆಯಲಾಗಿದೆ ಎಂದು ವರದಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಸದಸ್ಯರಾದ ನಾರಾಯಣಗೌಡ,ಕಣೀವೆಪುರ ಸುನೀಲ್ ಕುಮಾರ್ ಹಾಗೂ ಮುತ್ತುಲಕ್ಷ್ಮೀ ವೆಂಕಟೇಶ್.ತಾಲೂಕಿನಲ್ಲಿ 11ಬಾಲ್ಯವಿವಾಹ ತಡಯಲಾಗಿದೆ ಎಂದು ಸಿಡಿಪಿಒ ಅವರು ಮಾಹಿತಿ‌ ನೀಡಿದ್ದಾರೆ ಆದರೆ ಅಷ್ಟೋಂದ್ ಪ್ರಕರಣಗಳು ಹೇಗೆ ಸಾಧ್ಯ..? ತಾಲೂಕಿನಲ್ಲಿ ಬಾಲ್ಯವಿವಾಹ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು.

ಅಲ್ಲದೆ.ಬಾಲ್ಯವಿವಾಹ ತಡೆಗೆ ಕೇವಲ ದೂರು ಬಂದಾಗ ಮಾತ್ರ ಕಾರ್ಯ ಮಗ್ನರಾಗದೆ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವನ್ನು ಪಡೆದು ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಡಿಪಿಒ ಅನಿತಾ ಅವರಿಗೆ ಸದಸ್ಯರು ಒತ್ತಾಯಿಸಿದರು.

ಬಿಇಒ ಬೈಯಪ್ಪರೆಡ್ಡಿ ಮಾಹಿತಿ ನೀಡಿ, ಶಾಲಾ ಆಸ್ತಿಗಳ ಬಗ್ಗೆ ತಕರಾರಿದ್ದು,ಸರ್ಕಾರಿ ಶಾಲೆಗಳು ಶೇ.60 ಶಾಲೆಯ ಹೆಸರಲ್ಲಿ ಇಲ್ಲವಾಗಿದೆ.ಕೆಲ ದಾನಿಗಳು 30/40 ವರ್ಷಗಳಿಂದೆ ಕೊಟ್ಟಿರುವುದು ನೊಂದಣಿಯಾಗದೆ ಉಳಿದಿದೆ.ದಾನ ಕೊಟ್ಟಿರುವ ಕೆಲ ಶಾಲೆಗಳಿಗೆ ದಾಖಲೆ ಇಲ್ಲ.ಇನ್ನು ದಾನ ನೀಡಿರುವವರು ಕಾಲವಾಗಿ ಪ್ರಸ್ತುತ ವಾರಸುದಾರರು ಶಾಲೆಯ ಸ್ವಾಧೀನಕ್ಕೆ ಒಪ್ಪುತ್ತಿಲ್ಲದಂತಹ ತಾಲೂಕಿನಲ್ಲಿ 80 ಪ್ರಕರಣಗಳಿವೆ.ಇದರಲ್ಲಿ 7ಪ್ರಕರಣಗಳನ್ನು‌ ಮನ ಒಲಿಸಿ ನೊಂದಣಿಗೆ ಒಪ್ಪಿಸಲಾಗಿದೆ ಎಂದರು.

ಸಮಸ್ಯೆ ಬಗೆಹರಿಸಲು 80 ಶಾಲೆಗಳ ಪಟ್ಟಿ ಪಡೆದು ಸಿಇಒ ಮೂಲಕ ಡಿಸಿ ಅವರಿಗೆ ತಲುಪಿಸಲಾಗುವುದೆಂದು ಅಧ್ಯಕ್ಷ ಶಶಿಧರ್ ಭರವಸೆ ನೀಡಿದರು.

ಬಿಇಒ / ಟಿಹೆಚ್ಒ ಕಾರ್ಯ ಪ್ರಶಂಸನೀಯ – ಕಣಿವೇಪುರ ಸುನೀಲ್ ಕುಮಾರ್ 

ಕರೊನಾ ಸಂಕಷ್ಟದ ನಡುವೆಯೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಿರ್ವಹಣೆಯಲ್ಲಿ ಬಿಇಒ ಬೈಯಪ್ಪರೆಡ್ಡಿ ಅವರ ತಂಡದ ಕಾರ್ಯ ಹಾಗೂ ಕರೊನಾ ಸೋಂಕು ನಿರ್ವಹಣೆಯಲ್ಲಿ ಆರೋಗ್ಯಾಧಿಕಾರಿ ಪರಮೇಶ್ವರ ಕಾರ್ಯ ಪ್ರಶಂಸನೀಯವಾಗಿದೆ ಎಂದು ಕಣಿವೇಪುರ ಸುನೀಲ್ ಕುಮಾರ್ ತಿಳಿಸಿದರೆ.ಸಭೆಯಲ್ಲಿದ್ದವರು ಚಪ್ಪಾಳೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ಉಳಿದಂತೆ ಅರಣ್ಯ ಇಲಾಖೆವತಿಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯ ಆವರಣದಲ್ಲಿ ಗಿಡ ನೆಡುವುದಕ್ಕೆ ಸೂಚನೆ.ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಬೋರ್ ವೆಲ್ ಕೊರೆಸುವುದು,ಅಥವಾ ಟ್ರಾಂಕರ್ ಮೂಲಕ  ನೀರು ಪೂರೈಕೆಗೆ ಕ್ರಮ ಮತ್ತಿತರ ವಿಚಾರಗಳನ್ನು ಚರ್ಚಿಸಲಾಯಿತು.

ಈ ವೇಳೆ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ,ಇಒ ಮುರುಡಯ್ಯ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮರಾಮಲಿಂಗಯ್ಯ,ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಸೇರಿದಂತೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

[ccc_my_favorite_select_button post_id="111121"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!