ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಪ್ರಕರಣದ ಮುಂಜಾಗ್ರತಾ ಕ್ರಮವಾಗಿ ನಗರಸಭೆ ವ್ಯಾಪ್ತಿಯ ವಿನಾಯಕನಗರ,ಚಿಕ್ಕಪೇಟೆ,ಸ್ನೇಹಲೋಕ ಎಲೆಕ್ಟ್ರಾನಿಕ್ ಹಿಂಬಾಗದ ವಸತಿ ಪ್ರದೇಶ,ಕಲ್ಲುಪೇಟೆ,ದೇಶದ ಪೇಟೆ ರಾಜೀವ್ ಗಾಂಧಿ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಹರಿತಲೇಖನಿಗೆ ತಿಳಿಸಿದ್ದಾರೆ.
ನಗರದ ಹಲವೆಡೆ ಸೀಲ್ ಡೌನ್ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಚಟುವಟಿಕೆ ಹಿನ್ನೆಲೆ, ಸಾಮಾಜಿಕ ಜಾಲತಾಣದಲ್ಲಿ ಕರೊನಾ ಕುರಿತು ಅಂಕಿ ಸಂಖ್ಯೆಗಳ ಕಾರುಬಾರು ಜೋರಾಗಿದ್ದು,ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳ ಅಧಿಕೃತ ಮಾಹಿತಿ ಇಲ್ಲದೆ ಸಾರ್ವಜನಿಕರನ್ನು ಆತಂಕಕ್ಕೆ ತಳ್ಳುತ್ತಿದ್ದಾರೆಂದು ತಾಲೂಕಿನ ಹಿರಿಯ ಆಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು 21 ಜನರಲ್ಲಿ ಕೋವಿಡ್-19 ಸೋಂಕು ದೃಡ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಪಟ್ಟಣದ ಕುಂಬರಪೇಟೆಯ 16 ಜನ ದೊಡ್ಡಬಳ್ಳಾಪುರದಲ್ಲಿ ಒಬ್ಬರು, ನೆಲಮಂಗಲದಲ್ಲಿ ಮೂವರು ಹಾಗೂ ಕೇರಳದಿಂದ ಬಂದಿದ್ದ ಒಬ್ಬರಿಗ ಸೇರಿದಂತೆ ಒಟ್ಟು ಇಪ್ಪತ್ತೊಂದು ಜನರಲ್ಲಿ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ-ಪಿ-14452 ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಕೋವಿಡ್ ತಪಾಸಣೆ ವೇಳೆ ಸೊಂಕು ಕಂಡು ಬಂದಿದೆ.ಇನ್ನೂ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಪಿ-14453 ತೀವ್ರ ಉಸಿರಾಟದ ತೊಂದರೆಯಿಂದ ನಿಗದಿತ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಸೊಂಕು ದೃಡಪಟ್ಟಿದ್ದು ಪಿ-14454 ಹಾಗೂ ಪಿ-14455 ಐಎಲ್ಐ ಕೇಸ್ ಗಳಾಗಿದ್ದು ನೆಲಮಂಗಲ್ಲಿ ಒಟ್ಟು ಮೂವರಿಗೆ ಸೊಂಕು ತಗುಲಿದೆ.
ಹೊಸಕೋಟೆ ನಗರ ಕುಂಬರಪೇಟೆ ನಿವಾಸಿಗಳಾದ ಪಿ-14435, ಪಿ-14436, ಪಿ-14437, ಪಿ-14438, ಪಿ-14439, , ಪಿ-14441, ಪಿ-14442, ಪಿ-14443, ಪಿ-14444, ಪಿ-114445, ಪಿ-14446, ಪಿ-14447, ಪಿ-14448, ಪಿ-14449 ಸೇರಿದಂತೆ ಒಟ್ಟು 16 ಜನರು ಕೊರೋನಾ ವೈರಾಣು ದೃಡಪಟ್ಟಿದ್ದು ಸೋಂಕಿತ ವ್ಯಕ್ತಿಯ (ಪಿ-10399) ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಆದ್ರೆ ಹೊಸಕೋಟೆಯ ಪಿ-14440 ಸೊಂಕೀತ ವ್ಯಕ್ತಿ (ಪಿ -8545) ದ್ವೀತಿಯ ಸಂಪರ್ಕ ಹಿನ್ನಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳ ಪಡಿಸಿದಾಗ ಸೊಂಕು ದೃಡಪಟ್ಟಿದೆ.
ಅಲ್ಲದೆ ಪಿ-1445 ಕೇರಳದಿಂದ ಗಮಿಸಿದ ಹಿನ್ನಲೆ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು ಈ ವೇಳೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೊಂಕು ದೃಡಪಟ್ಟಿದೆ.
ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.