ದೊಡ್ಡಬಳ್ಳಾಪುರ: ಭಾರತೀಯ ಜನತಾ ಪಾರ್ಟಿ ವಿವಿಧ ಮೋರ್ಚಾಗಳ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕಾತಿ ಪಟ್ಟಿಯನ್ನು ಇಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್.ನಾಗರಾಜು ಬಿಡುಗಡೆ ಮಾಡಿದ್ದಾರೆ.
ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೊಡಿಗೇಹಳ್ಳಿ ಕೆ.ಪಿ.ವೆಂಕಟೇಶ್, ಉಪಾಧ್ಯಕ್ಷೆಯಾಗಿ ಆಲಹಳ್ಳಿ ಉಮಾದೇವಿ, ಪ್ರಧಾನ ಕಾರ್ಯದರ್ಶಿ ಶರತ್ಕುಮಾರ್ ನೇಮಕವಾಗಿದ್ದಾರೆ.
ಮಹಿಳಾ ಮೋರ್ಚಾ ಲೀಲಾವತಿ ಅಧ್ಯಕ್ಷೆ. ಅಲ್ಪ ಸಂಖ್ಯಾತರ ಮೋರ್ಚಾ ಅಮ್ಜದ್ಪಾಷ ಅಧ್ಯಕ್ಷ, ಶೇಕ್ಶಿವರಾಜ್ ಖಾನ್ ಪ್ರಧಾನ ಕಾರ್ಯದರ್ಶಿ. ಯುವ ಮೋರ್ಚಾ ಕಿರಣ್ಗೌಡ ಅಧ್ಯಕ್ಷ, ಚಂದನ್ ಪ್ರಧಾನ ಕಾರ್ಯದರ್ಶಿ, ಹರೀಶ್ಕುಮಾರ್ ಕಾರ್ಯದರ್ಶಿ. ನಗರ ಒಬಿಸಿ ಮೋರ್ಚಾ ಚಂದ್ರಶೇಖರ್ ಅಧ್ಯಕ್ಷ, ಕೃಷ್ಣಪ್ಪ ಉಪಾಧ್ಯಕ್ಷ, ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಬೀರೇಶ್ ಕಾರ್ಯದರ್ಶಿ. ಎಸ್ಸಿ ಮೋರ್ಚಾ ದೇವರಾಜು ಅಧ್ಯಕ್ಷ, ವೆಂಕಟರಾಜು ಉಪಾಧ್ಯಕ್ಷ, ರಾಮಾಂಜಿನಪ್ಪ ಪ್ರಧಾನ ಕಾರ್ಯದರ್ಶಿ. ಎಸ್ಟಿ ಮೋರ್ಚಾ ಟಿ.ಶ್ರೀನಿವಾಸ್ ಅಧ್ಯಕ್ಷ, ಮಂಜುನಾಥ ಪ್ರಧಾನ ಕಾರ್ಯದರ್ಶಿ, ಪಾಪಣ್ಣ ಕಾರ್ಯದರ್ಶಿ.