ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 5) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಇಲ್ಲವೆಂದು ನಮೂದಾಗಿದೆ.
ಆದರೆ ಭಾನುವಾರ ಮಧ್ಯಾನ್ಹದಿಂದ ಕೊವಿಡ್ -19ರ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ರಾಜೀವ್ ಗಾಂಧಿ ಆಶ್ರಯಬಡಾವಣೆ,ರೋಜಿಪುರ,ಗಾಣಿಗರಪೇಟೆ,ಭುವನೇಶ್ವರಿ ನಗರ,ಚೈತನ್ಯ ನಗರ,ವಿಠೋಬಾ ದೇವಸ್ಥಾನದ ರಸ್ತೆ,ನಂದಿ ಮೋರಿ ರಸ್ತೆಯ ರಿಲಯನ್ಸ್ ಪ್ರೆಷ್ ಮಾರ್ಕೆಟ್ ಎದುರಿನ ಪ್ರದೇಶವನ್ನು ನಗರಸಭೆಯಿಂದ ಶೀಲ್ ಡೌನ್ ಮಾಡಲಾಗಿದೆ.
ಆದರೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸೋಂಕಿತರಿಲ್ಲದಿದ್ದರೂ ಯಾವ ಕಾರಣಕ್ಕೆ ಶೀಲ್ ಡೌನ್ ಮಾಡಲಾಗುತ್ತಿದೆ ಎಂಬ ಆತಂಕ / ಅನುಮಾನವನ್ನು ಜನತೆಯಲ್ಲಿ ಉಂಟುಮಾಡಿದೆ.