ದೊಡ್ಡಬಳ್ಳಾಪುರ: ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ,ಸರ್ಕಾರಿ ನೌಕರರನ್ನು ಕರೊನಾ ವಾರಿಯರ್ಸ್ ಎಂದು ಘೋಷಿಸಿ,ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕೆಂದು ಕರ್ನಾಟಕ ರಾಜ್ಯ ನೌಕರರ ಸಂಘದ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಈ ಕುರಿತು ಮನವಿ ಪತ್ರ ಸಲ್ಲಿಸಿದ ನೌಕರರು ಮಾತನಾಡಿ.
ಸಾಂಕ್ರಾಮಿಕ ಸೋಂಕಾದ ಕರೊನಾ ತಡೆಗಟ್ಟಲು ಸರ್ಕಾರದ ಎಲ್ಲಾ ಇಲಾಖೆಯ ನೌಕಕರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.ಆದರೆ,ಕರ್ತವ್ಯ ನಿರತರಾಗಿ ಮೃತ ಪಟ್ಟರೆ ಸೌಲಭ್ಯ ವಂಚಿತರಾಗುತ್ತಿದ್ದು,ಆರೋಗ್ಯ ಮತ್ತು ಪೊಲೀಸ್ ಇಲಾಖೆ ನೌಕರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡುವ ಪರಿಹಾರವನ್ನು ಎಲ್ಲಾ ಇಲಾಖೆಯವರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕರೊನಾ ನಿಯಂತ್ರಣಕ್ಕಾಗಿ ಕರ್ತವ್ಯ ನಿರತರಾಗಿದ್ದ ವೇಳೆ,ಕರೊನಾ ಸೋಂಕು ದೃಢ ಪಟ್ಟು.ಸಾವನಪ್ಪಿದ,ಕಾಡುಗೋಡಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಕೆ.ಬಿ.ಉಮೇಶ್ ಅವರ ಕುಟುಂಬಕ್ಕೆ 50ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ,ಉಪಾಧ್ಯಕ್ಷ ರಾಜಶೇಖರ್,ಪ್ರಧಾನ ಕಾರ್ಯದರ್ಶಿ ಧನಂಜಯ, ಸಂಘಟನಾ ಕಾರ್ಯದರ್ಶಿ ವಿ.ಗೋವಿಂದಪ್ಪ,ಜಂಟಿ ಕಾರ್ಯದರ್ಶಿ ಚಂದ್ರಪ್ಪ,ಪ್ರಾಂಶುಪಾಲರಾದ ಲಕ್ಷ್ಮೀಪತಿ,ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಗಳಾದ ಎಸ್.ಶಿವಪ್ಪ,ವಿಜಯಕುಮಾರ್,ಬಿ.ರಾದಾಮಣಿ,ಅಣ್ಣಯ್ಯ,ಶಂಕರನಾರಾಯಣ್,ಗೋವಿಂದರಾಜ್,ನಿರ್ದೇಶಕರಾದ ನರಸಿಂಹ,ಶ್ರೀಧರ್,ಮನೋಜ್ ಮತ್ತಿತರರಿದ್ದರು