ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಆರೋಗ್ಯ ಇಲಾಖೆ ವರದಿ ಬಿಡುಗಡೆ ಮಾಡಿ.ಮೂರು ಗಂಟೆಗಳ ನಂತರ ಬಿಡುಗಡೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆ ವರದಿಯ ಅನ್ವಯ.ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 13 ರಂದು 21 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ದೇವನಹಳ್ಳಿ ತಾಲ್ಲೂಕಿನಲ್ಲಿ 1, ಹೊಸಕೋಟೆ ತಾಲ್ಲೂಕಿನಲ್ಲಿ 5 ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 15 ಪ್ರಕರಣ ವರದಿಯಾಗಿದೆ. ಹರಿತಲೇಖನಿ
ಆದರೆ ದೊಡ್ಡಬಳ್ಳಾಪು ತಾಲೂಕಿನಲ್ಲಿ ಅನೇಕ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗುತ್ತಿರುವ ಕಾರ್ಯ ಮುಂದುವರೆದಿದೆ.ಸೋಮವಾರವಾದ ಇಂದು ನಗರಸಭೆ ವ್ಯಾಪ್ತಿಯ ಕೋಟೆ ರಸ್ತೆ,ಕುಚ್ಚಪ್ಪನಪೇಟೆ,ನಗರ್ತರಪೇಟೆ,ರೋಜಿಪುರ,ಬಸವ ಭವನದ ಹಿಂಭಾಗದ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದರೆ.ಗ್ರಾಮಾಂತರ ಪ್ರದೇಶದ ಹೆಜ್ಜಾಜಿ ಹಾಗೂ ಕಸುವನಹಳ್ಳಿಯನ್ನು ಸೀಲ್ಡೌನ್ ಮಾಡಲಾಗಿದೆ.
ಹರಿತಲೇಖನಿ
ಇಂದಿನ ವರದಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣ ದೃಢ ಪಟ್ಟಿಲ್ಲವೆಂದು ವರದಿಯಾಗಿದೆ.ಆಗಾದರೆ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸೀಲ್ ಡೌನ್ ಪ್ರಕ್ರಿಯೆ ಮುಂದುವರೆದಿರುವುದು ಯಾವ ಕಾರಣಕ್ಕೆ ಎಂಬ ಅನುಮಾನ ಸಾರ್ವಜನಿಕರದ್ದು.
ಸತ್ತವನ ಮಾಹಿತಿ ಎಲ್ಲಿ..?
ಹರಿತಲೇಖನಿಗೆ ಸಿಕ್ಕಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ.ಜಿಲ್ಲಾಧಿಕಾರಿ ಕರೊನಾ ಸೋಂಕಿನ ಕಾರಣ ಚಿಕಿತ್ಸೆಗೆ ಒಳಗಾದ ನಂತರ,ಕರೊನಾ ಸೋಂಕಿತರ ಪಟ್ಟಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೌಪ್ಯತೆ ಕಾಪಾಡುತ್ತಿದೆ ಎನ್ನಲಾಗಿದೆ.ಪ್ರತಿ ನಿತ್ಯ ನೀಡುತ್ತಿರುವ ವರದಿ ಸಾರ್ವಜನಿಕರಲ್ಲಿ ಅನುಮಾನ ಹೆಚ್ಚಿಸುತ್ತಿದೆೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಸುವನಹಳ್ಳಿಯಲ್ಲಿ ಮೃತ ಪಟ್ಟವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗುತ್ತಿದೆ,ಆದರೆ ವರದಿಯಲ್ಲಿ ಉಲ್ಲೇಖವೇ ಇಲ್ಲವಾಗಿದೆ.
ಹರಿತಲೇಖನಿ
ರಾಜ್ಯ ಸರ್ಕಾರ ಕರೊನಾ ಸೋಂಕು ಉಲ್ಬಣದ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಜುಲೈ 14ರಿಂದ ಲಾಕ್ ಡೌನ್ ಘೋಷಣೆ ಮಾಡಿದೆ.ಆದರೆ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ವರದಿಗೂ,ಸರ್ಕಾರದ ಕ್ರಮಕ್ಕು ಹಾಗೂ ನಗರಸಭೆ/ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಲಾಗುತ್ತಿರುವ ಸೀಲ್ ಡೌನ್ಗಳಿಗೂ ಸಂಬಂಧವೇ ಇಲ್ಲವಾಗಿದೆ ಎಂಬುದು ಸಾರ್ವಜನಿಕರ ಅಂಬೋಣ.