ದೊಡ್ಡಬಳ್ಳಾಪುರ: ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳೆದ ಸಾಲಿನಲ್ಲಿ ಕಾಲೇಜಿನ ಉತ್ತಮ ನಿರ್ವಹಣೆಗಾಗಿ ಸತತ ಮೂರನೇ ಬಾರಿಗೆ ನ್ಯಾಕ್ ನಿಂದ ಬಿ ಶ್ರೇಣಿ ಪಡೆದಿದೆ. ಅಗತ್ಯ ಮೂಲ ಸೌಕರ್ಯಗಳೊಂದಿಗೆ 2020-21ನೇ ಸಾಲಿಗೆ ಪದವಿ ತರಗತಿಗಳಿಗೆ ದಾಖಲಾತಿಗಳು ಆರಂಭವಾಗಿವೆ.
ಕಾಲೇಜಿನಲ್ಲಿ ಮೂಲ ಸೌಕರ್ಯಗಳು :
ಕಾಲೇಜು 5 ಎಕರೆ ವಿಸ್ತೀರ್ಣ ಹೊಂದಿದ್ದು,32 ಸಾವಿರ ಚದರ ಅಡಿಗಳಷ್ಟು ಕಟ್ಟಡಗಳು ನಿರ್ಮಾಣವಾಗಿವೆ.ಕಾಲೇಜಿನಲ್ಲಿ ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ ಪ್ರಾರಂಭವಾಗಿದೆ. ಆಧುನಿಕ ಸೌಲಭ್ಯಗಳ ವ್ಯವಸ್ಥೆಯನ್ನು ಹೊಂದಿರುವ ತರಗತಿ ಕೊಠಡಿಗಳು ನಿರ್ಮಾಣಗೊಂಡಿವೆ. ಸೆಮಿನಾರ್ ಹಾಲ್ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಯತರ ಶಿಕ್ಷಣ ಅಭಿಯಾನ (ರೂಸಾ)ಅಡಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್‌ಗಳು ನಿರ್ಮಾಣವಾಗಿವೆ. ರಾಷ್ಟ್ರೀಯ ಗುಣಮಟ್ಟ ಪರಿಶೀಲನಾ ಸಮಿತಿ (ನ್ಯಾಕ್) ಭೇಟಿ ನೀಡಿ, ಕಾಲೇಜಿನ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಿ ಶ್ರೇಣಿ ಯನ್ನು ನೀಡಿದೆ. ಸರ್ಕಾರದ ಎಲ್ಲ ಮಾನದಂಡಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶೈಕ್ಷಣಿಕ ಕಲಿಕಾ ವಾತಾವರಣ ಹೊಂದಿರುವ ಕಾರಣದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಲೀಡ್ ಕಾಲೇಜ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕಾಲೇಜಿನಲ್ಲಿ ವಿವಿಧ ಕಂಪನಿಗಳಿಂದ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗ ದೊರಕಿಸಿಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಬಡವರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿವಿಧ ವಿದ್ಯಾರ್ಥಿ ವೇತನಗಳ ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರದ ನಿಯಮನುಸಾರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಯ್ಯ ತಿಳಿಸಿದ್ದಾರೆ
ಪಠ್ಯೇತರ ಚಟುವಟಿಕೆಗಳಿಗೆ ಒತ್ತು:
ಪಠ್ಯದಾಚೆಗಿನ ಚಟುವಟಿಕೆಗಳಿಗು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಠ್ಯ ಪುಸ್ತಕದ ಜೊತೆಗೆ ವಿದ್ಯಾರ್ಥಿಗಳ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಇಂಗ್ಲೀಷ್ ಸಂವಹನ, ಸಾಮಾನ್ಯ ಜ್ಞಾನ ಕಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್‍ಸ್ ಮತ್ತು ರೇಂಜರ್‍ಸ್, ರೆಡ್ ಕ್ರಾಸ್ ಸಂಸ್ಥೆ ಘಟಕಗಳಿವೆ. ಸಮಾಜ ವಿಜ್ಞಾನ ವೇದಿಕೆ, ವಾಣಿಜ್ಯ ವೇದಿಕೆ, ನೇಗಿಲಯೋಗಿ ಸಾಹಿತ್ಯ ವೇದಿಕೆಗಳ ಮೂಲಕ ವಿವಿಧ ವಿಷಯಗಳಿಗೆ ಸಂಬಂಸಿದಂತೆ ತಜ್ಞರಿಂದ ಪ್ರತಿ ತಿಂಗಳು ಉಪನ್ಯಾಸಗಳನ್ನು ಕೊಡಿಸಲಾಗುತ್ತಿದೆ. 27 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದ್ದು ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಸ್ನಾತಕೋತ್ತರ ಕೇಂದ್ರ : 2017ನೇ ಸಾಲಿನಲ್ಲಿ ಆರಂಭವಾದ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ (ಪೊಲಿಟಿಕಲ್ ಸೈನ್ಸ್, ಇತಿಹಾಸ) ಹಾಗೂ ಎಂ.ಕಾಂ ವಿಷಯಗಳು ಲಭ್ಯವಿದೆ. ತಾಲೂಕಿನ ವಿದ್ಯಾರ್ಥಿಗಳು ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.
ದಾಖಲಾತಿಗಳು ಆರಂಭ:
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಬಿ.ಎ (ಹೆಚ್.ಇ.ಪಿ, ಕೆ.ಎಚ್.ಪಿ, ಕೆ.ಇ.ಜೆ ), ಬಿ.ಎಸ್ಸಿ (ಪಿ.ಸಿ.ಎಂ, ಪಿಎಂಸಿಎಸ್) ಹಾಗೂ ಬಿ,ಕಾಂ, ಕೋರ್ಸುಗಳು ಲಭ್ಯವಿದ್ದು, ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿಗಳನ್ನು ಕಾಲೇಜಿನ ಕಚೇರಿಯಲ್ಲಿ ಪಡೆದು ಸಲ್ಲಿಸಬಹುದು ಅಥವಾ http://shorturl.at/yCS08 ಲಿಂಕ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಸಲ್ಲಿಸಬಹುದು. ಹಾಗೂ ಹೆಚ್ಚಿನ ಮಾಹಿತಿಗೆ ಮೊ:9986685357 ಅಥವಾ 9902538795 ಗೆ ಸಂಪರ್ಕಿಸಬಹುದಾಗಿದೆ.