ದೊಡ್ಡಬಳ್ಳಾಪುರ: ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕುಮಾರ್ ಕೊಡಿಗೇಹಳ್ಳಿ ಗ್ರಾಮಪಂಚಾಯಿತಿಗೆ ವರ್ಗಾವಣೆಯಾಗಿದ್ದು,ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ರಾಷ್ಟ್ರ ಮಟ್ಟದ ಕೀರ್ತಿ ತಂದ ಪಿಡಿಒ ಕುಮಾರ್ ಕುರಿತು ಹರಿತಲೇಖನಿ ಸಂಗ್ರಹಿಸಿದ ವಿಶೇಷ ವರದಿ.
ಕಳೆದ ಮೂರು ವರ್ಷಗಳ ಕಾಲ ಬಾಶೆಟ್ಟಿಹಳ್ಳಿ ಪಿಡಿಒ ಆಗಿ ಸೇವೆ ಸಲ್ಲಿಸಿದ ಉತ್ಸಾಹಿ ಯುವ ಪಿಡಿಒ ಕುಮಾರ್,ಅಧ್ಯಕ್ಷರು,ಸದಸ್ಯರ ವಿಶ್ವಾಸಗಳಿಸಿ ರಾಷ್ಟ ಮಟ್ಟದಲ್ಲಿ ಬಾಶೆಟ್ಟಹಳ್ಳಿಯ ಕೀರ್ತಿ ಸಾರಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಬೆಂಗಳೂರು /ಹಿಂದೂಪುರ ನಡುವಿನ ಬ್ಯಾಂಕ್ ಸರ್ಕಲ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ನೀಗಿಸಲು,ಹಲವು ವಿರೋಧದ ನಡುವೆಯೂ ರಸ್ತೆ ಬದಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಮೇಲ್ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಟ್ರಾಫಿಕ್ ಸಮಸ್ಯೆಗೆ ನೀಗಿಸಲು ಶ್ರಮಿಸಿದ್ದಾರೆ.ಸರ್ಕಾರಿ ಶಾಲೆಗೆ ಉತ್ತಮವಾದ ಜಾಗ ಸೌಲಭ್ಯ ಕಲ್ಪಿಸಿದ್ದು,ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಕ್ಕು ಡಿಜಿಟಲ್ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ (ಡಿಜಿಟಲ್ ರಿಚಾರ್ಜ್ ಜೊತೆ), ಹಸಿ ಕಸ / ಒಣ ಕಸ ಬೇರ್ಪಡಿಸಲು ಪ್ರತಿ ಮನೆಗೆ ಉಚಿತವಾಗಿ ಎರಡು ಬಣ್ಣದ ಬಕೇಟ್ ವಿತರಣೆ, ಅಲ್ಲದೆ ರಾಜ್ಯಮಟ್ಟದ ಡಿಜಿಟಲ್ ಲೈಬ್ರರಿ ಸ್ಥಾಪನೆ,ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಯಶಸ್ವಿ ಆಯೋಜನೆ ಇವರ ಶ್ರಮವನ್ನು ಸಾರುತ್ತದೆ.
ಮಾದರಿ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ
ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಮಾದರಿಯಾದ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿದ್ದ ಇವರು,ಪ್ರತಿ ಗ್ರಾಮ,ಶಾಲೆಗಳಲ್ಲಿ ತ್ಯಾಜ್ಯ ವಿಂಗಡಣೆಗೆ ಅರಿವು ಮೂಡಿಸುವ ಕ್ರಮಕೈಗೊಂಡು ಪರಿಸರ ಕಾಳಜಿ ಮೆರೆದಿದ್ದಾರೆ. ಈ ಘಟಕದ ವೀಕ್ಷಣೆಗೆ ರಾಜ್ಯ ಹಾಗೂ ರಾಷ್ಟ್ರದ ಒಂದು ಸಾವಿರಕ್ಕು ಹೆಚ್ಚು ಹಿರಿಯ ಅಧಿಕಾರಿಗಳು,ವಿವಿಧ ಗ್ರಾಮಪಂಚಾಯಿತಿ ಸದಸ್ಯರು ಭೇಟಿ ನೀಡಿ,ತಮ್ಮ ವ್ಯಾಪ್ತಿಯಲ್ಲಿ ಇದೇ ಮಾದರಿಯ ಘಟಕ ಅಳವಡಿಕೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ರಾಷ್ಟ್ರ ಹಾಗೂ ಎರಡು ರಾಜ್ಯ ಪ್ರಶಸ್ತಿ ಹಿರಿಮೆ
ಇವರ ಅಧಿಕಾರವಧಿಯಲ್ಲಿ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ದೀನ ದಯಾಳ್ ಉಪಾಧ್ಯಾಯ ಗ್ರಾಮ ಸಶಕ್ತಿಕರಣ ರಾಷ್ಟ್ರ ಪ್ರಶಸ್ತಿ, ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಕರ್ನಾಟಕ ವಿಧಾನ ಪರಿಷತ್ ಪುರಸ್ಕಾರ ಸೇರಿದಂತೆ ಒಂದು ರಾಷ್ಟ್ರ ಹಾಗೂ ಎರಡು ರಾಜ್ಯ ಪ್ರಶಸ್ತಿ ದೊರೆತಿದೆ.
ಗ್ರಾಮಪಂಚಾಯಿತಿಗೆ ಪಿಡಿಒಗಳಾಗಿ ಅಧಿಕಾರಿಗಳು ಬರುತ್ತಾರೆ / ಓಗುತ್ತಾರೆ.ಆದರೆ,ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಕ್ರಮಗಳು ಶಾಶ್ವತವಾಗಿ ಉಳಿತ್ತವೆ.
ಉತ್ಸಾಹಿ ಯುವ ಅಧಿಕಾರಿ ಪಿಡಿಒ ಕುಮಾರ್ ಈಗ ಕೊಡಿಗೇಹಳ್ಳಿ ಗ್ರಾಮಪಂಚಾಯಿತಿಗೆ ವರ್ಗಾವಣೆಯಾಗಿದ್ದು ಇಲ್ಲಿಯೂ ಬಾಶೆಟ್ಟಿಹಳ್ಳಿಯಲ್ಲಿ ಆದಂತ ಅಭಿವೃದ್ಧಿ ಕಾರ್ಯಗಳು ಆಗಲೆಂಬುದು ಹರಿತಲೇಖನಿ ತಂಡದ ಕಳಕಳಿ.