ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಕಾರಣ ಉಂಟಾಗಿರುವ ಮಕ್ಕಳ ಕಲಿಕಾ ತೊಂದರೆಗಳನ್ನು ನೀಗಿಸಲು.ಇಂದಿನಿಂದ ಚಂದನ ವಾಹಿನಿಯಲ್ಲಿ ಇ – ತರಗತಿಗಳು ಆರಂಭಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು,ಜುಲೈ 20ರ ಸೋಮವಾರ ಬೆಳಿಗ್ಗೆ 9-30 ಗಂಟೆಯಿಂದ ದೂರದರ್ಶನ ಚಂದನ ವಾಹಿನಿ ಮತ್ತು ಡಿಡಿ ಚಂದನ ಯು-ಟ್ಯೂಬ್ ಚಾನಲ್ ಮೂಲಕ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ 8 ನೇ ತರಗತಿ ಹಾಗೂ ಪ್ರೌಢಶಾಲಾ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಇ-ತರಗತಿಗಳು ಆರಂಭಿಸಲಾಗುತ್ತಿದೆ.
ಮುಖ್ಯ ಶಿಕ್ಷಕರು,ಶಿಕ್ಷಕರು,ಪೋಷಕರು ಮತ್ತು ವಿದ್ಯಾರ್ಥಿಗಳು ಪಠ್ಯಪುಸ್ತಕ,ನೋಟ್ ಬುಕ್, ಪೆನ್ನು ಮುಂತಾದ ಕಲಿಕಾ ಸಾಮಗ್ರಿಗಳೊಂದಿಗೆ ವೀಕ್ಷಣೆ ಮಾಡಿ ಅದರ ಸಂಪೂರ್ಣ ಉಪಯೋಗ ಪಡೆಯಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.