ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದ 13 ಮಂದಿ ಸೇರಿದಂತೆ,ಇಂದು ತಾಲೂಕಿನಲ್ಲಿ 28 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ
ಅವರು ನೀಡಿರುವ ತಾಲೂಕಿನ ಕೋವಿಡ್ -19 ಬುಲೆಟಿನಲ್ಲಿ ಮಾಹಿತಿಯಂತೆ.ಬುಧವಾರ 16 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರು ಸೇರಿ ಇಪ್ಪತ್ತೆಂಟು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ಕಾಡತಿಪ್ಪೂರಿನಲ್ಲಿ 13, ದೊಡ್ಡಬಳ್ಳಾಪುರದ ಕರೊನಾ ವಾರಿಯರ್ಸ್ 3, ಚೈತನ್ಯನಗರದ 2, ಶ್ರೀರಾಮ ಆಸ್ಪತ್ರೆಯ 4, ತ್ಯಾಗರಾಜನಗರ 2, ವಿದ್ಯಾನಗರ 1, ಶಾಂತಿನಗರ 1, ಮಾನಸ ಕೆಂಪೇಗೌಡ ಆಸ್ಪತ್ರೆಯ 1 ಹಾಗೂ ಯಲಹಂಕದ ಬಾಬ ನಗರದ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 233 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಏಳು ಮಂದಿ ಮೃತ ಪಟ್ಟಿದ್ದರೆ, ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 51 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 169 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.