ದೊಡ್ಡಬಳ್ಳಾಪುರ: ಕೋವಿಡ್-19 ವೈರಾಣು ಸ್ಫೋಟ ಮತ್ತು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ರಾಜ್ಯ ಆಯುಕ್ತರ ಆದೇಶದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ(ಚಿಕ್ಕಮಧುರೆ) ಗ್ರಾಮದಲ್ಲಿರುವ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯದಲ್ಲಿ ಜುಲೈ 25 ರಿಂದ ಆಗಸ್ಟ್ 15 ರವರೆಗೆ ಪ್ರತಿ ಶ್ರಾವಣ ಮಾಸದ ಶನಿವಾರ ಹಾಗೂ ಭಾನುವಾರದಂದು ಭಕ್ತಾಧಿಗಳಿಗೆ ಮತ್ತು ಸಾರ್ವಜನಿಕರಿಗೆ ದೇವರ ದರ್ಶನ ಹಾಗೂ ಸದರಿ ದಿನಾಂಕಗಳಂದು ಜರುಗಲಿರುವ ಜಾತ್ರೆ / ಉತ್ಸವಗಳು ಹಾಗೂ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.