ದೊಡ್ಡಬಳ್ಳಾಪುರ: ತಾಲೂಕಿನಲ್ಲಿಂದು 7 ಮಂದಿಗೆ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ನಗರಸಭೆ ಹಾಗೂ ತಾಲೂಕು ಕಚೇರಿಗೂ ಒಕ್ಕರಿಸಿದೆ.
ನಗರಸಭೆಯ ಸಿಬ್ಬಂದಿ ಹಾಗೂ ತಾಲೂಕು ಕಚೇರಿಯ ಸರ್ವೆ ಸಿಬ್ಬಂದಿಯೋರ್ವರಿಗೆ ಸೋಂಕು ದೃಢಪಟ್ಟ ಕಾರಣ 48ಗಂಟೆಗಳ ಕಾಲ ನಗರಸಭೆ ಹಾಗೂ ಸರ್ವೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಕಚೇರಿಯ ಒಂದು ಕೊಠಡಿಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ತಾಲೂಕಿನ ಕೋವಿಡ್ -19 ಬುಲೆಟಿನಲ್ಲಿ ಮಾಹಿತಿಯಂತೆ ಇಂದು 6 ಮಂದಿ ಪುರುಷರು ಹಾಗೂ ಒಬ್ಬ ಮಹಿಳೆ ಸೇರಿ ಏಳು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ಬಿ.ನಾರಾಯಣಪ್ಪ ಲೇಔಟ್ 1, ಕಮಲೂರು 1, ಗಂಗಾಧರಪುರ 1, ಟ್ಯಾಂಕ್ ರಸ್ತೆ 1, ರೈಲ್ವೆ ಸ್ಟೇಷನ್ 1, ಹೇಮಾವತಿ ಪೇಟೆ 1, ವಡ್ಡನಹಳ್ಳಿಯ ಒಬ್ವರಿಗೆ ಸೋಂಕು ದೃಢಪಟ್ಟಿದೆ.
ಶುಕ್ರವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 274 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಒಂಬತ್ತು ಮಂದಿ ಮೃತ ಪಟ್ಟಿದ್ದರೆ,82 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 29 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 154 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.