ದೊಡ್ಡಬಳ್ಳಾಪುರ: ನಗರದಾದ್ಯಂತ ಕರೊನಾ ನಿಯಂತ್ರಣಕ್ಕಾಗಿ ಅವಿರತ ಶ್ರಮಿಸಿದ್ದ ನಗರಸಭೆ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಆದೇಶದ ಮೇರೆ ಎರಡು ದಿನಗಳ ಕಾಲ ನಗರಸಭೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ನಗರಸಭೆ ಮೂಲಗಳು ಹರಿತಲೇಖನಿಗೆ ತಿಳಿಸಿವೆ
ನಗರದಲ್ಲಿ ಕರೊನಾ ಸೋಂಕು ನಿರ್ವಹಣೆಯಲ್ಲಿ ನಿರತರವಾಗಿ ಶ್ರಮಿಸಿದ್ದ ನಗರಸಭೆ ಸಿಬ್ಬಂದಿಯ ತಪಾಸಣೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು,ಮುಂಜಾಗ್ರತಾ ಕ್ರಮವಾಗಿ 48ಗಂಟೆಗಳ ಕಾಲ್ ನಗರಸಭೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಮಾನವೀಯತೆ ಮೆರೆದು ಸೋಂಕಿಗೊಳಗಾದ ನಗರಸಭೆ ಸಿಬ್ಬಂದಿ
ಕರೊನಾ ಸೋಂಕಿತರ ಮನೆಗೆ ಅಗತ್ಯ ವಸ್ತುಗಳಿಲ್ಲದೆ ಸಂಕಷ್ಟಕ್ಕೆ ಒಳಗಾದ ಸಂಧರ್ಭದಲ್ಲಿ.ಧೈರ್ಯದಿಂದ ಅಂತಹ ಮನೆಗಳಿಗೆ,ಅಗತ್ಯ ವಸ್ತುಗಳನ್ನು ತಲುಪಿಸಿ ಅವರ ಕಷ್ಟವನ್ನು ಹೋಗಲಾಡಿಸಲು ಪ್ರಯತ್ನಿಸಿದ ಸಿಬ್ಬಂದಿ ಕರೊನ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅವರ ದಿಟ್ಟತನ,ಮಾನವೀಯ ಗುಣ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಪ್ರಶಂಸೆಗೆ ಕಾರಣವಾಗಿದೆ.