ದೊಡ್ಡಬಳ್ಳಾಪುರ: ತಾಲೂಕಿನ ಕರೊನಾ ಸೋಂಕಿತರ ಸಂಖ್ಯೆ ಸುನಾಮಿಯಂತೆ ಬಂದೆರಗಿದ್ದು,ಭಾನುವಾರ ಒಂದೆ ದಿನ ತಾಲೂಕಿನಲ್ಲಿ 97 ಸೋಂಕಿತ ಪ್ರಕರಣಗಳು ದೃಢಪಟ್ಟಿದೆ.
ಕನಸವಾಡಿ ಹೋಬಳಿಯ ಕಸುವನಹಳ್ಳಿಯಲ್ಲಿ ಅತಿ ಹೆಚ್ಚು ಒಂಬತ್ತು ಮಂದಿಗೆ ಸೋಂಕು ದೃಢಪಟ್ಟಿದ್ದರೆ,ಮರಣ ಹೊಂದಿದವರ ಸಂಖ್ಯೆ ಹನ್ನೆರಡಕ್ಕೆ ಏರಿಕೆಯಾಗಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ. ಇಂದು 67 ಮಂದಿ ಪುರುಷರು ಹಾಗೂ 30 ಮಂದಿ ಮಹಿಳೆ ಸೇರಿ ಒಟ್ಟು 97 ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ಇಸ್ಲಾಂಪುರ 1, ಕೊನಘಟ್ಟ ವ್ಯಾಪ್ತಿಯ ಆದಿನಾರಾಯಣಹೊಸಹಳ್ಳಿ1, ಬಾಶೆಟ್ಟಿಹಳ್ಳಿ 6, ಬೋಕಿಪುರ 2,ಚೈತನ್ಯನಗರ 2,ಚಿಕ್ಕಪೇಟೆ 1,ದರ್ಗಾಮಹಲ್ 1,ದರ್ಗಾಜೋಗಹಳ್ಳಿ 1,ದರ್ಗಾಪುರ 1, ದೊಡ್ಡಹೆಜ್ಜಾಜಿ 4, ದೊಡ್ಡಬಳ್ಳಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ 3, ದಾಸಗೊಂಡನಹಳ್ಳಿ 6, ದೊಡ್ಡತುಮಕೂರು 1,ರಾಜಘಟ್ಟ 1, ಗಾಂಧಿನಗರ 1, ಗಂಗಾಧರಪುರ 4,ಗುಂಡಮಗೆರೆ 1, ಗಾಣಿಗರಪೇಟೆ 2, ಹೊನ್ನಾವರ 1,ಹುಸ್ಕೂರು 1,ಇಸ್ತೂರು ಕಲೋನಿ 1, ಕಲಾಸಿಪಾಳ್ಯ 1, ಕಲ್ ಪೇಟೆ 2, ಕಂಟನಕುಂಟೆ 1, ಕರೇನಹಳ್ಳಿ 1, ಕಾರೇಪುರ 1, ಖಾಸ್ ಬಾಗ್ 1, ಕಸುವನಹಳ್ಳಿಯ 9, ಮಾರುತಿನಗರ 4, ಮುತ್ಯಾಲಮ್ಮ ದೇವಸ್ಥಾನದ ರಸ್ತೆ 1, ಪೊಲೀಸ್ ಕ್ವಾಟ್ರಸ್ 2, ರೈಲ್ವೇ ಸ್ಟೇಷನ್ 2, ರಾಜೀವ್ ಗಾಂಧಿ ಕಾಲೋನಿ 1, ರಾಮದೇವನಹಳ್ಳಿ 3, ರೋಜೀಪುರ 5, ಸಂಜಯನಗರ 1, ಶಾಂತಿನಗರ 2, ಸೋಮೇಶ್ವರ ಬಡಾವಣೆ 2, ಶ್ರೀ ರಾಮ ಆಸ್ಪತ್ರೆ 1, ಟಿಬಿ ವೃತ್ತದ ಬಳಿಯ ಪ್ರಿಯದರ್ಶಿನಿ ಬಡಾವಣೆ 1,ತಳಗವಾರ 6, ತಂಬೇನಹಳ್ಳಿ 1, ತ್ಯಾಗರಾಜನಗರ 1, ತಪಸೀಹಳ್ಳಿ 2, ವಡ್ಡರಪೇಟೆಯ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ.
ಭಾನುವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 376 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಹನ್ನೆರಡು ಮಂದಿ ಮೃತ ಪಟ್ಟಿದ್ದರೆ,82 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 30 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 252 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.