ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಜುಲೈ 26 ರಂದು) 213 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ವರದಿಯನ್ನು ವಾರ್ತಾ ಇಲಾಖೆ ನೀಡಿದೆ.
ಇಲಾಖೆ ವರದಿ ಅನ್ವಯ ನೆಲಮಂಗಲ ತಾಲ್ಲೂಕಿನಲ್ಲಿ 51, ಹೊಸಕೋಟೆ ತಾಲ್ಲೂಕಿನಲ್ಲಿ 29, ದೇವನಹಳ್ಳಿ ತಾಲ್ಲೂಕಿನಲ್ಲಿ 18 ಹಾಗೂ ಬೆಂಗಳೂರು ನಗರ ಹಾಗೂ ಇತರೆ ಜಿಲ್ಲೆಗಳ 39 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಉಳಿದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕರೊನಾ ಸೊಂಕಿತರ ಕುರಿತಂತೆ ಜಿಲ್ಲಾ ವರದಿ ಹಾಗೂ ತಾಲೂಕು ವರದಿ ನಡುವೆ ಗೊಂದಲವಿರುವ ಕಾರಣ ಹರಿತಲೇಖನಿ ಇಂದೂ ಸಹ ಪ್ರಕಟಿಸುತ್ತಿಲ್ಲ.