ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು,131 ಮಂದಿ ಕರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ ಅನ್ವಯ.ಸೋಮವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 4 ಗಂಡು ಹಾಗೂ 3 ಮಹಿಳೆಯರು ಸೇರಿ ಏಳು ಜನರಿಗೆ ಸೋಂಕು ದೃಢ ಪಟ್ಟಿದ್ದು,ಇಬ್ಬರು ಮರಣ ಹೊಂದಿದ್ದಾರೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ನಗರದ ಖಾಸ್ ಬಾಗ್ ನ ಪಿಳ್ಳೆ ಗೌಡ ಕಾಂಪ್ಲೆಕ್ಸ್ 1 ಗಂಡು, ಟ್ಯಾಂಕ್ ರಸ್ತೆ 1 ಗಂಡು, ಸೋಮೇಶ್ವರ ಎಕ್ಸ್ ಟೆನ್ಷನ್ 2 ಹೆಣ್ಣು, ಕನಕದಾಸ ರಸ್ತೆ 1 ಹೆಣ್ಣು, ಕನಸವಾಡಿ ಕಾಲೋನಿ 1 ಗಂಡು ಹಾಗೂ ರೋಜಿಪುರದ ಕೋರ್ಟ್ ರಸ್ತೆಯಲ್ಲಿ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 383 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,131 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.ಅಲ್ಲದೆ ಸಾವನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ದೊಡ್ಡಬಳ್ಳಾಪುರದ ಇಬ್ಬರ ಸಾವು
ನಗರದ ಹೇಮಾವತಿ ಪೇಟೆಯ 76ವರ್ಷದ ಪುರುಷ ತೀವ್ರ ಉಸಿರಾಟದ ಸಮಸ್ಯೆ,ಮಧುಮೇಹದಿಂದ ಮೃತಪಟ್ಟಿದ್ದರೆ,ತ್ಯಾಗರಾಜ ನಗರದ 60ವರ್ಷದ ಪುರುಷ ರಕ್ತದ ಒತ್ತಡ ಹಾಗೂ ಉಸಿರಾಟದ ಸಮಸ್ಯೆ ಹಾಗೂ ರಕ್ತದ ಒತ್ತಡದಿಂದ ಮೃತಪಟ್ಟಿದ್ದರೆಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಸೋಂಕಿಗೆ ಒಳಗಾದ 30 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 208 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.